ಭ್ರಷ್ಟರ ಎದೆಯಲ್ಲಿ ಶುರುವಾಯ್ತು ನಡುಕ: ಮತ್ತೆ ಹಳೆಯ ದಿನಗಳನ್ನು ನೆನಪಿಸುವಂತೆ ಭ್ರಷ್ಟರ ಭೇಟೆಯಾಡುತ್ತಾ ಲೋಕಾಯುಕ್ತಾ..?

ಬೆಂಗಳೂರು

ಬೆಂಗಳೂರು: 2016 ರಲ್ಲಿ ಸಿದ್ದರಾಮಯ್ಯ ಸರ್ಕಾರ  ಎ ಸಿ ಬಿ ರಚನೆ ಮಾಡಿ ಮೇಲೆ  ಲೋಕಾಯುಕ್ತ  ಹಲ್ಲುನ ಕಿತ್ತ ಹಾವಿನಂತಾಗಿ ಬಿಟ್ಟಿತ್ತು ಮೂಲೆಗುಂಪು ಸೇರಿ ಬಿಟ್ಟಿತ್ತು.ಕಳೆದ 6 ವರ್ಷದಿಂದ ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳು ರೆಕ್ಕೆಗೆ ನೀರು ಹಾಕಿಕೊಂಡು ರಾಜಾ ರೋಷದಿಂದ ಮೆರಿತಾ ಇದ್ರು .ಆದ್ರೆ ಈಗ ಭ್ರಷ್ಟಾಚಾರಿಗಳ ಎದೆಯಲ್ಲಿ ಮತ್ತೆ ನಡುಕ ಶುರುವಾಗಿದೆ.  ಅದ್ಯಾಕೆ ಅಂತೀರಾ? ಅದು ಇವತ್ತು ಹೈಕೋರ್ಟ್ ನೀಡುರುವ ಆದೇಶವೇ ಭ್ರಷ್ಟರ ನಡುಕಕ್ಕೆ ಕಾರಣ. ನ್ಯಾಯಾಲಯ  ಅಂತಹ ಯಾವ ಆದೇಶ ನೀಡಿದೆ ಅಂತೀರ. ಅದನ್ನೇ  ತೋರಿಸ್ತೀವಿ ನೋಡಿ.

2016ಕ್ಕಿಂತ ಹಿಂದೆ  ಲೋಕಾಯುಕ್ತ ಅಂದ್ರೆ ಸಾಕು ಭ್ರಷ್ಟರು  ಕನಸ್ಸಿನಲ್ಲೂ ಬೆಚ್ಚಿ ಬಿದ್ದು  ನಡುಗಿ ಹೋಗುತ್ತಿದ್ರು. ನ್ಯಾ.ಮೂರ್ತಿ ವೆಂಕಟಾಚಲಯ್ಯ ಹಾಗು ನ್ಯಾ. ಸಂತೋಷ್ ಹೆಗಡೆ ಯವರಿದ್ದಾಗಂತು ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳು  ಸಾಲು ಸಾಲಾಗಿ ಜೈಲಿಗೆ ಹೋಗಿ ಮುದ್ದೆ ಮುರಿದಿದ್ರು. ಆದ್ರೆ 2016 ಮಾರ್ಚ್ ನಲ್ಲಿ ಆಗಿನ ಸಿದ್ದರಾಮಯ್ಯರ ಸರ್ಕಾರ ಲೋಕಾಯುಕ್ತಕ್ಕೆ ಇದ್ದ ಅಧಿಕಾರವನ್ನು ಕಿತ್ತುಕೊಂಡು ಎಸಿಬಿ ರಚನೆ ಮಾಡಿತ್ತು.

ಅಂದಿನಿಂದ ಲೋಕಾಯುಕ್ತ ನಾಮಾಕಾವಸ್ಥೆಗೆ ಮಾತ್ರ ಎನ್ನುವಂತಾಗಿ ಭ್ರಷ್ಟರ ವಿರುದ್ದ ಸಮರ ಸಾರಲು ತನಗಿದ್ದ ಎಲ್ಲಾ ಅಸ್ತ್ರಗಳನ್ನು ಕಳೆದುಕೊಂಡು ಇದ್ದು ಇಲ್ಲದಂಗಾಗಿ ಬಿಟ್ಟಿತ್ತು.ಆದ್ರೆ ಒಂದು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯನ್ನು ಡಮ್ಮಿ ಮಾಡಿ ಎಸಿಬಿ ರಚನೆ ಮಾಡಿದ್ದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಸ್ ಆರ್ ಹಿರೇಮಠ್ ,ವಕೀಲ ಚಿದಾನಂದ್  ಸೇರಿದಂತೆ ಇನ್ನೂ ಹಲವರು ಕೋರ್ಟ್ ನಲ್ಲಿ ಪಿ ಐ ಎಲ್  ಹಾಕಿದ್ರು. ಕಳೆದ 5 ವರ್ಷದಿಂದ ವಿರಣೆ ಮಾಶಡಿದ ಹೈಕೋರ್ಟ್ ವಿಭಾಗಿಯ ಪೀಠ ಎಸಿಬಿ ರಚನೆಯನ್ನು ರದ್ದು ಪಡಿಸಿ ಇಂದು ಮಹತ್ವದ ಆದೇಶ ನೀಡಿದೆ.ಅಷ್ಟೇ ಅಲ್ಲದೇ ಎಸಿಬಿ ಎಲ್ಲಾ ಠಾಣೆಗಳನು ಲೋಕಾಯುಕ್ತದಲ್ಲಿ ವಿಲೀನ ಮಾಡುವಂತೆ ಆದೇಶದಲ್ಲಿ ತಿಳಿಸಿದೆ.

ಹಿರಿಯ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಕಳೆದ 6 ವರ್ಷಗಳಿಂದ ಲೂ ಎ ಸಿ ಬಿ ರಚನೆಯ  ದುರುದ್ದೇಶ ಹಾಗು ಅಕ್ರಮದ ಬಗ್ಗೆ ಹೋರಾಟ ಮಾಡಿದ್ದರ ಫಲವಾಗಿ ಇಂದು ಹೈಕೋರ್ಟ್ನ ದ್ವಿಸದಸ್ಯ ಪೀಠ ಎ ಸಿ ಬಿ ಯನ್ನು ರದ್ದು ಮಾಡಿದೆ ಇದು ಸಂವಿಧಾನಕ್ಕೆ ಸಂದ ಜಯ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಂತಸ ವ್ಯೆಕ್ತಪಡಿಸಿದ್ದಾರೆ.

ಇನ್ನು ಎಸಿಬಿ ರಚನೆಯನ್ನು ರದ್ದು ಗೊಳಿಸಿ ಲೋಕಾಯುಕ್ತದಲ್ಲಿ ವಿಲೀನ ಮಾಡುವಂತೆ  ಹೈಕೋರ್ಟ್ ನೀಡಿರುವ ಆದೇಶಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ  ಎಲ್ಲಾ ರಾಜ್ಯಗಳಲ್ಲೂ ಇದೆ. ಆದ್ದರಿಂದಲೆ ನಾವೂ ಕರ್ನಾಟಕದಲ್ಲೂ ರಚನೆ ಮಾಡಿದ್ದೆವು . ಈಗ ಹೈಕೋರ್ಟ್ ಎಸಿಬಿಯನ್ನು ರದ್ದು ಪಡಿಸಿ ನೀಡಿರುವ ಆದೇಶಕ್ಕೆ ನಾವು ತಲೆಬಾಗುತ್ತೇವೆ  ಎಂದಿದ್ದಾರೆ.

ಸದ್ಯದ ಹೈಕೋರ್ಟ್ ತೀರ್ಪಿನಿಂದ ಈಗ ಎಸಿಬಿಯಲ್ಲಿರುವ ಎಲ್ಲಾ ಕೇಸ್ ಗಳೂ ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. .2016 ರಿಂದ ಇಲ್ಲಿಯವರೆಗು ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳು ಇನ್ನು ಲೋಕಾಯುಕ್ತದಲ್ಲೇ ವಿಚಾರಣೆ ನೆಡೆಯಲಿವೆ. ಒಟ್ಟಿನಲ್ಲಿ ಹಲ್ಲು ಕಿತ್ತ ಹಾವಿನಂತಾಗಿದ್ದ ಲೋಕಾಯುಕ್ತಕ್ಕೆ ಇಂದಿನ ಆದೇಶದಿಂದ ಮತ್ತೆ ಶಕ್ತಿ ಬಂದತಾಗಿದೆ. ಇದರಿಂದಾಗಿ ಲೋಕಾಯುಕ್ತ ಸಂಸ್ಥೆ  ಮತ್ತೆ ತನ್ನ ಹಳೆಯ ಶೈಲಿಯಲ್ಲಿ ಭ್ರಷ್ಟರ ಭೇಟೆ ಶುರುವಿಟ್ಟು ಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

Leave a Reply

Your email address will not be published.