ಮನೆಯಲ್ಲಿಯೇ ಡ್ರಗ್ಸ್ ಮತ್ತಲ್ಲಿ ತೇಲುತ್ತಿದ್ದ ಜೋಡಿ..! ಬಂಧಿತ ಲವ್ ಬರ್ಡ್ಸ್ ಸ್ಟೋರಿಯೇ ರೋಚಕ

ಬೆಂಗಳೂರು

ಬೆಂಗಳೂರು: ಹುಳಿಮಾವು ಠಾಣೆ ಪೊಲೀಸರಿಂದ 8 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ವಶಕ್ಕೆ ಪಡೆದ ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಮಾಹಿತಿ ಲಭಿಸಿದೆ. 12 ಲೀಟರ್ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಆರೋಪಿಗಳ ಮೊಬೈಲ್​​ನಲ್ಲಿ ಕೆಲವಷ್ಟು ವಿಡಿಯೋಗಳು ಲಭಿಸಿವೆ. ಮೊಬೈಲ್ ನಲ್ಲಿ ಮತ್ತೇರಿಸಕೊಳ್ತಿರೊ ವಿಡಿಯೋ ಸಿಕ್ಕಿದ್ದು ಆರೋಪಿಗಳು ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಮೂಗಿನ‌ ಮೂಲಕ ಎಳೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಬಂಧಿತ ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಇಬ್ಬರೂ ಬೆಂಗಳೂರು ನಗರದ ಕೊತ್ತನೂರು ದಿನ್ನೆಯ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮಾದಕ ವಸ್ತು ಸೇವನೆಗೆಂದೇ ಪ್ಲಾಟ್‌ ಅನ್ನು ಕಲರ್ ಫುಲ್ ಲೈಂಟಿನ್‌ನಿಂದ ಈ ಜೋಡಿ ಡೆಕೋರೇಟ್ ಮಾಡಿತ್ತು. ಟ್ಯಾಟೂ ಆರ್ಟಿಸ್ಟ್ ಆಗಿದ್ದ ವಿಷ್ಣುಪ್ರಿಯಾ ರೂಮ್ ನಲ್ಲೂ ಡಿಸೈನ್ ಮಾಡಿದ್ಲು. ಬೆಂಗಳೂರಿನಲ್ಲಿ ಡ್ರಗ್ಸ್ ಗೆ ಹೆಚ್ಚು ಬೇಡಿಕೆ ಹಾಗೂ ಮೋಜು ಮಸ್ತಿಗೆ ಹಾಟ್ ಸ್ಪಾಟ್ ಎಂದು ಸಿಟಿಗೆ ಬಂದು ಈ ಜೋಡಿ ಸೆಟ್ಲ್ ಆಗಿತ್ತು. ಇಲ್ಲೇ ಡ್ರಗ್ಸ್ ಡೀಲ್ ಮಾಡುತ್ತಾ ಇದ್ದರು.

ಪ್ರತಿ ದಿನ ಮನೆಯಲ್ಲೇ ಡ್ರಗ್ಸ್ ಪಾರ್ಟಿ

ಈ ಜೋಡಿ ಡ್ರಗ್ಸ್  ಅಡಿಕ್ಟ್ ಆಗಿದ್ದರು. ಪ್ರತಿದಿನ ಮನೆಯಲ್ಲಿಯೇ ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರು. ಡ್ರಗ್ಸ್ ತೆಗೆದುಕೊಂಡು ಕಲರ್ ಲೈಟಿಂಗ್ಸ್ ಹಾಕಿದ್ರೆ ನಶೆ ಏರುತ್ತೆ ಎಂದು ಈ ರೀತಿ ಕೋಣೆಯನ್ನು ಡಿಸೈನ್ ಮಾಡಿಕೊಂಡಿದ್ದರು. ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಸೇವನೆ ಮಾಡೋದು, ರೂಮ್ ನಲ್ಲಿ ಲೈಟಿಂಗ್ಸ್ ಹಾಕಿ ಮೋಜು ಮಸ್ತಿ ಮಾಡೋದನ್ನ ಈ ಪ್ರೇಮಿಗಳು ವಿಡಿಯೋ ಮಾಡಿಕೊಳ್ತಿದ್ರು.

ಕೇರಳ ಮೂಲದ ವಿದ್ಯಾರ್ಥಿಗಳೇ ಟಾರ್ಗೆಟ್

ಈ ಖತರ್ನಾಕ್ ಜೋಡಿ ಕೇರಳ ಮೂಲದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಡ್ರಗ್ಸ್ ಡೀಲ್‌ಗೆ ಬಳಸಿಕೊಳ್ಳುತ್ತಾ ಇದ್ದರು.  ಐಷಾರಾಮಿ ಲೈಫ್ ಗೆ ಡ್ರಗ್ಸ್ ಸಪ್ಲೈ ಮಾಡೋದನ್ನೇ ವೃತ್ತಿ ಮಾಡಿಕೊಂಡಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ಬಸ್‌ನಲ್ಲೇ ಹೋಗಿ ಆಶಿಶ್ ಆಯಿಲ್ ತರುತ್ತಾ ಇದ್ದರು ಎನ್ನಲಾಗಿದೆ. ಬಸ್ ನಲ್ಲಿ ಸಪ್ಲೈ ಮಾಡಿದ್ರೆ ಪೊಲೀಸ್ರಿಗೆ ಸಿಗಲ್ಲವೆಂದು ಪ್ಲಾನ್ ಮಾಡಿ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published.