Home District ಶುಕ್ರವಾರ ಚಾಮರಾಜನಗರ ಜಿಲ್ಲೆಯಲ್ಲಿ 420 ಮಂದಿ ಕೋರೊನಾ ದೃಢ; 2312 ಸಕ್ರಿಯ ಪ್ರಕರಣ ದಾಖಲು

ಶುಕ್ರವಾರ ಚಾಮರಾಜನಗರ ಜಿಲ್ಲೆಯಲ್ಲಿ 420 ಮಂದಿ ಕೋರೊನಾ ದೃಢ; 2312 ಸಕ್ರಿಯ ಪ್ರಕರಣ ದಾಖಲು

370
0

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಶುಕ್ರವಾರ ಕರಾಳವೆನಿಸಿದೆ. ಶುಕ್ರವಾರ ಒಂದೇ ದಿನ 420 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 9 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 147 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 2312 ಕ್ಕೇರಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 238 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 8534 ಮಂದಿ ಗುಣಮುಖರಾಗಿದ್ದಾರೆ . ಶುಕ್ರವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 388 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 32 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಶುಕ್ರವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 420 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 126 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 99 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 114 , ಹನೂರು ತಾಲ್ಲೂಕಿನಲ್ಲಿ 57 , ಯಳಂದೂರು ತಾಲ್ಲೂಕಿನಲ್ಲಿ 23 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದಂತೆ 420 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಗುರುವಾರ 1881 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 148832 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಶುಕ್ರವಾರ ಕೋರೊನಾ ಸೋಂಕಿನಿಂದ ಮೃತವರೆಂದರೆ, ಏಪ್ರಿಲ್ 28 ರಂದು ದಾಖಲಾಗಿದ್ದ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದ 65 ವರ್ಷದ ಪುರಷ , ಏಪ್ರಿಲ್ 27 ರಂದು ದಾಖಲಾಗಿದ್ದ ಯಳಂದೂರು ತಾಲ್ಲೂಕಿನ 90 ವರ್ಷದ ವೃದ್ದರು, ಚಾಮರಾಜನಗರ ಪಟ್ಟಣದ 56 ವರ್ಷದ ಪುರುಷ, ಚಾಮರಾಜನಗರ ತಾಲ್ಲೂಕಿನ ಹುಲ್ಲೇಪುರದ 55 ವರ್ಷದ ಪುರುಷಮ ಏಪ್ರಿಲ್ 29 ರಂದು ದಾಖಲಾಗಿದ್ದ ಹನೂರು ತಾಲ್ಲೂಕಿನ ಕೂಡ್ಲೂರು ಗ್ರಾಮದ 55 ವರ್ಷದ ಪುರುಷ, ಕೊಳ್ಳೇಗಾಲ ತಾಲ್ಲೂಕಿನ ಹೊಸಪಾಳ್ಯ ಗ್ರಾಮದ 68 ವರ್ಷದ ಪುರುಷರವರುಗಳು ಏಪ್ರಿಲ್ 29 ರಂದು ಗುರುವಾರ ಸಾವನ್ನಪ್ಪಿದ್ದಾರೆ. ಹಾಗೂ ಶುಕ್ರವಾರದಂದು, ಏಪ್ರಿಲ್ 22 ರಂದು ದಾಖಲಾಗಿದ್ದ ಮೂಡ್ಲಾಕೂಡು ಗ್ರಾಮದ 60 ವರ್ಷದ ಮಹಿಳೆ, ಚಾಮರಾಜನಗರ ಪಟ್ಟಣದ 65 ವರ್ಷದ ಪುರುಷ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಏಪ್ರಿಲ್ 29 ರಂದು ಕೋವಿಡ್ ದೃಡವಾಗಿದ್ದ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದ 55 ವರ್ಷದ ಪುರುಷ ಹೋಂ ಐಸೋಲೇಷನ್ ನಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಶುಕ್ರವಾರ ಒಂಭತ್ತು ಮಂದಿ ದುರ್ಮರಣ ಕೋವಿಡ್ ಆಸ್ಪತ್ರೆಯಲ್ಲಿ ಎಂಟು ಹೋಂ ಐಸೂಲೇಷನ್ ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಗುರುವಾರ 1881 ಮಂದಿಗೆ ಲಸಿಕೆ ನೀಡಲಾಗಿದ್ದು ಇದೂವರೆಗೂ 148832 ಮಂದಿಗೆ ಲಸಿಕೆ ನೀಡಲಾಗಿದೆ.

Previous articleಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ; ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
Next articleಬೋಗಸ್ ಬಿಲ್ ಬರೆಯಲು ಒತ್ತಾಯಿಸಿ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ; ವಿಡಿಯೋ ವೈರಲ್

LEAVE A REPLY

Please enter your comment!
Please enter your name here