Home Health ಕೋವಿಡ್ ಸೋಂಕಿತ ಮಹಿಳೆ ಸಾವು; ಸಂಬಂಧಿಕರಿಂದ ದಾಂಧಲೆ

ಕೋವಿಡ್ ಸೋಂಕಿತ ಮಹಿಳೆ ಸಾವು; ಸಂಬಂಧಿಕರಿಂದ ದಾಂಧಲೆ

ಕೋವಿಡ್ ಸೋಂಕಿತ ಮಹಿಳೆ ಸಾವು; ಸಂಬಂಧಿಕರಿಂದ ದಾಂಧಲೆ

549
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ಕೋರೊನಾ ಸೋಂಕಿತ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ರೊಚ್ಚಿಗೆದ್ದ ಸಂಬಂದಿಕರು ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಮೇಲೆ ಆಕ್ಸಿಜನ್ ಸಿಲಿಂಡರ್ ನಿಂದ ಹಲ್ಲೆಗೆ ಮುಂದಾಗಿ ಕಿಟಕಿ ಬಾಗಿಲಿ ದ್ವಂಸ ಮಾಡಿದ ಘಟನೆ ಜಿಲ್ಲೆಯ ಗುಂಡ್ಲುಪೇಟಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಗುಂಡ್ಲುಪೇಟೆ ಪಟ್ಟಣದ ನಾಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದ ಮೃತ ಕುಟುಂಬದ ಸಂಬಂಧಿಕರು ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಮೇಲೆ ಅಲ್ಲೇ ಇದ್ದ ಆಕ್ಸಿಜನ್ ಸಿಲಿಂಡರ್ ನಿಂದ ಹಲ್ಲೆಗೆ ಮುಂದಾದರು. ಈ ವೇಳೆ ಆಸ್ಪತ್ರೆಯ ಕಿಟಕಿ ಮತ್ತು ಬಾಗಿಲು ಜಖಂಗೊಂಡಿದೆ. ಹಠತ್ತಾಗಿ ನಡೆದ ಘಟನೆಯಿಂದ ಕಂಗಲಾದ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಆತಂಕದಿಂದ ಇದ್ದು, ಕೆಲ ಹೊತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡದೇ ಇದ್ದರು.

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಮುಂದಾಗಿದ್ದ ಮೃತ ಸೋಂಕಿತರ ಸಂಬಂಧಿ ಗಿರೀಶ್ ನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದರು. ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಗೆ ಗುಂಡ್ಲುಪೇಟೆ ತಹಸೀಲ್ದಾರ್ ರವಿಶಂಕರ್, ಸರ್ಕಲ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ರವರು ಆಗಮಿಸಿ, ಪರಿಸ್ಥಿತಿಯನ್ನುತಿಳಿಗೊಳಿಸುವಲ್ಲಿ ಮುಂದಾದರು.

VIAಕೋವಿಡ್ ಸೋಂಕಿತ ಮಹಿಳೆ ಸಾವು; ಸಂಬಂಧಿಕರಿಂದ ದಾಂಧಲೆ
SOURCEಕೋವಿಡ್ ಸೋಂಕಿತ ಮಹಿಳೆ ಸಾವು; ಸಂಬಂಧಿಕರಿಂದ ದಾಂಧಲೆ
Previous articleಜನರ ರಕ್ಷಣೆಗೆ ಸರ್ಕಾರ ಮುಂದಾಗಬೇಕು; ಕಾಂಗ್ರೆಸ್ ಮುಖಂಡ ರವಿಕುಮಾರ್ ಮನವಿ
Next articleಲಾಕ್ ಡೌನ್ ವಿಚಾರ; ಸಚಿವರ ನಡುವೆ ಭುಗಿಲೆದ್ದ ಗೊಂದಲ!

LEAVE A REPLY

Please enter your comment!
Please enter your name here