ರಾರಾಜಿಸುತ್ತಿರುವ ಜನಪ್ರತಿನಿಧಿಗಳ ಪ್ಲೆಕ್ಸ್: ತೋರಣಕ್ಕೆ ಬಳಸುವ ದಾರ ಅಪಾಯಕಾರಿ – ಸ್ಥಳೀಯರು ಕಿಡಿ

ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಎಲ್ಲೆಡೆ ಬ್ಯಾನರ್, ಪ್ಲೆಕ್ಸ್‌ಗಳ ಹಾವಳಿ ಮುಂದುವರೆದಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಗರಂ ಆಗಿದ್ದಾರೆ‌. ಮುಖ್ಯವಾಗಿ ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಹತ್ತಾರು ವಿದ್ಯುತ್ ಕಂಬ, ಮರಗಳಿಗೆ ಬ್ಯಾನರ್​​ಗಳನ್ನು ಅಳವಡಿಸಲಾಗಿದೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ

ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪುತ್ರ ಜೀಶಾನ್ ಅಜೀಂ ಈ ಬ್ಯಾನರ್​​​ಗಳನ್ನು ಹಾಕಿರುವ ಆರೋಪಗಳಿದ್ದು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತೋರಣ ಮತ್ತು ಬ್ಯಾನರ್‌ಗಳಿಂದ ಬೈಕ್ ಸವಾರರ ಜೀವಕ್ಕೆ ಕಂಟಕ ಒದಗುತ್ತದೆ. ನಗರದ ಸೌಂದರ್ಯ ಕೆಡಿಸುತ್ತಿರುವ ಫ್ಲೆಕ್ಸ್- ಬಂಟಿಂಗ್ಸ್​ಗಳನ್ನು ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸುವುದಕ್ಕೆ ನಿಷೇಧವಿದ್ದರೂ ಜನಪ್ರತಿನಿಧಿಗಳು ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವುದು ಮರುಕಳಿಸುತ್ತಲೇ ಇದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

Leave a Reply

Your email address will not be published.