CRIME.. ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ..!

ಅಪರಾಧ

ಬೆಂಗಳೂರು: ಕುಡಿದ ಅಮಲಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಫ್ರೆಂಡ್ಸ್ ಬಾರ್ ಬಳಿ ನಡೆದಿದೆ. ಮೋಹನ್ ಅಲಿಯಾಸ್​ ಮುಂಗುಸಿ ಮೃತ ದುರ್ದೈವಿಯಾಗಿದ್ದು, ಬಾರ್ ಬೆಂಡರ್ ಕೆಲಸ ಮಾಡಿಕೊಂ ಡಿದ್ದ. ಮೃತ ಮುಂಗುಸಿ 18ವರ್ಷಗಳಿಂದ ಬಾಗಲಗುಂಟೆಯಲ್ಲಿ ವಾಸವಾಗಿದ್ದು, ಎಂದಿನಂತೆ ಕೆಲಸ ಮುಗಿಸಿಕೊಂಡು ಬಾರ್​ಗೆ ಹೋಗಿ ದ್ದಾರೆ. ಈ ವೇಳೆ ಮುಂಗುಸಿ, ಪವನ್, ಕಿಶೋರ್, ಮತ್ತೋರ್ವ ಸೇರಿ ನಾಲ್ವರ ಮಧ್ಯೆ ಜಗಳ ಆರಂಭವಾಗಿದೆ. ಗಲಾಟೆ ಅತಿರೇಕಕ್ಕೇ ರಿದ್ದು, ಉಳಿದ ಮೂವರು ಮುಂಗುಸಿಯನ್ನು ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣದ ಆರೋಪಿ ಕಿಶೋರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.