Crime.. ಕಾಲೇಜು ಫೆಸ್ಟ್ ವೇಳೆ ನಡೆಯಿತು ದುರಂತ: ಸಿಲಿಕಾನ್ ಸಿಟಿಯಲ್ಲಿ ವಿದ್ಯಾರ್ಥಿಯ ಕೊಲೆ

ಅಪರಾಧ ಬೆಂಗಳೂರು

ಬೆಂಗಳೂರು: ಜಗಳವಾಡಿ ವಿದ್ಯಾರ್ಥಿಯ ಕೊಲೆಯಾಗಿರುವ ಘಟನೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಾವಿನ್ಸ್ ಕಾಲೇಜ್ ವಿದ್ಯಾರ್ಥಿ ಅರ್ಬಜ್ (16) ಕೊಲೆಯಾದವ. ನಿನ್ನೆ ಕಾಲೇಜ್ ಫೆಸ್ಟ್​ನಲ್ಲಿ ವಿದ್ಯಾರ್ಥಿಗಳ ಜೊತೆ ಜಗಳ ನಡೆದಿತ್ತು. ನಿನ್ನೆ ಜಗಳ ಮಾಡಿಕೊಂಡಿದ್ದ ವಿದ್ಯಾರ್ಥಿ ಇಂದು ಕೊಲೆಯಾಗಿದ್ದಾನೆ. ಎದುರಾಳಿ ವಿದ್ಯಾರ್ಥಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.