Crime News.. ದೈನಂದಿನ ಖರ್ಚುವೆಚ್ಚಕ್ಕಾಗಿ ಆಟೋ ರಿಕ್ಷಾ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್..!

ಅಪರಾಧ ಬೆಂಗಳೂರು

ಬೆಂಗಳೂರು: ದೈನಂದಿನ ಖರ್ಚು ವೆಚ್ಚಕ್ಕಾಗಿ ಆಟೋ ರಿಕ್ಷಾವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜು.29 ರಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಶಂಕರನಗರದ ಬಿಬಿಎಂಪಿ ಆಸ್ಪತ್ರೆ ಮುಂಭಾಗ ತಮ್ಮ ಬಜಾಜ್ ಆಟೋರಿಕ್ಷಾ ವಾಹನವನ್ನು ನಿಲ್ಲಿಸಿ, ಚಾಲಕ ಹೋಗಿದ್ದು, ಕೆಲ ಸಮಯದ ನಂತರ ಬಂದು ನೋಡಲಾಗಿ, ಆಟೋ ರಿಕ್ಷಾ ಇರಲಿಲ್ಲ. ಈ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

ನಂದಿನಿಲೇಔಟ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ಹಗಲಿನ ವೇಳೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ವಿಧಾನಸೌಧಲೇಔಟ್ ಸರ್ಕಲ್ ಬಳಿ ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡಿದ್ದು, ಈ ಬಗ್ಗೆ ವಿಚಾರಿಸಿ ಪರಿಶೀಲನೆ ಮಾಡಿದಾಗ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿರುವ ತ್ರಿಚಕ್ರವಾಹನವೆಂದು ತಿಳಿದು ಬಂದಿದೆ. ಕೂಡಲೇ ಆತನನ್ನು ಬಂಧಿಸಿ 2 ಲಕ್ಷ ರೂ. ಬೆಲೆ ಬಾಳುವ 2 ಬಜಾಜ್ ಕಂಪನಿ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published.