ಸಾಗುವಳಿ ಚೀಟಿ ನೀಡಲು ಹಿಂದೇಟು: ಮಾಜಿ ಯೋಧನಿಂದ ಏಕಾಂಗಿ ಪ್ರತಿಭಟನೆ

ಜಿಲ್ಲೆ

ಕೋಲಾರ: ಸಾಗುವಳಿ ಚೀಟಿ ನೀಡದೆ ತಮಗೆ ‌ಕಿರುಕುಳ ನೀಡುತಿದ್ದಾರೆ ಎಂದು ಆರೋಪಿಸಿ ಮಾಜಿ ಯೋಧರೊಬ್ಬ ಏಕಾಂಗಿ ಹೋರಾ ಟಕ್ಕೆ ಮುಂದಾಗಿದ್ದಾರೆ. ಕೋಲಾರದ ಜಿಲ್ಲಾಧಿಕಾರಿ ಕಛೇರಿಯ ಬಳಿ ಪ್ರತಿಟನೆಗೆ‌ ಮುಂದಾಗಿರುವ ಇವರ ಹೆಸರು ನಾಗಪ್ಪ.ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ದೊಡ್ಡವಲ್ಲಬಿ ಗ್ರಾಮದವರು.

ಕೇಂದ್ರೀಯ ಮೀಸಲು ಪಡೆ (ಸಿಐಎಸ್ಎಫ್) ನಲ್ಲಿ‌ ಒಂಬತ್ತು ವರ್ಷ ಸೇವೆ ಸಲ್ಲಿಸಿರುವ ನಾಗಪ್ಪ ಈಗ ಗ್ರಾಮದಲ್ಲಿ ವಾಸವಿದ್ದಾರೆ. ಸರ್ವೆ ನಂಬರ್ 158ರಲ್ಲಿ ಕಳೆದ 25 ವರ್ಷಗಳಿಂದ ಕೃಷಿ ಮಾಡುತಿದ್ದೇವೆ. ಆದ್ರೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತಿದ್ದು  ಸಾಗುವಳಿ‌ ಚೀಟಿ ನೀಡುತ್ತಿಲ್ಲ. ಆದ್ದರಿಂದ ಏಕಾಂಗಿ ಪ್ರತಿಭಟನೆ ಮಾಡುತಿದ್ದೇನೆ.ಇದಕ್ಕು ನನಗೆ ಸಾಗುವಳಿ ಚೀಟಿ ನೀಡದಿದ್ದಲ್ಲಿ ದಯಾಮರಣ‌ ನೀಡಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.