Home District D.K.ಶಿವಕುಮಾರ್-H.D.ರೇವಣ್ಣ ನಡುವಿನ ಮುಸುಕಿನ ಗುದ್ದಾಟ..??!! ಮೈತ್ರಿ ಧರ್ಮ ಮೀರಿ 51 ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆ ಹಿಂದೆ...

D.K.ಶಿವಕುಮಾರ್-H.D.ರೇವಣ್ಣ ನಡುವಿನ ಮುಸುಕಿನ ಗುದ್ದಾಟ..??!! ಮೈತ್ರಿ ಧರ್ಮ ಮೀರಿ 51 ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆ ಹಿಂದೆ ರೇವಣ್ಣ ಕೈವಾಡ..???

810
0
SHARE

ಆಡಳಿತ ಯಂತ್ರದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಸ್ತಕ್ಷೇಪ ತೀವ್ರವಾಗಿರುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಲೋಕೋಪಯೋಗಿ, ಇಂಧನ ಹಾಗೂ ಜಲಸಂಪನ್ಮೂಲ ಇಲಾಖೆಯ 52ಕ್ಕೂ ಹೆಚ್ಚು ಇಂಜಿನಿಯರ್ ಗಳು, ಮುಖ್ಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಲಾಗಿದೆ…

ಈ ಸಾಮೂಹಿಕ ವರ್ಗಾವಣೆಯ ಹಿಂದೆ ಹೆಚ್.ಡಿ.ರೇವಣ್ಣ ಅವರ ಕೈವಾಡವಿದೆ ಎನ್ನಲಾಗಿದೆ.ಮುಖ್ಯ ಇಂಜಿನಿಯರ್ ಗಳ ವರ್ಗಾವಣೆ ಅಧಿಕಾರ ಇರುವುದು ಸಿಎಂ ಗೆ ಮಾತ್ರ.ಮೂರೂ ಇಲಾಖೆಯಲ್ಲಿದ್ದ ತಮಗೆ ಬೇಕಾದ ಅಧಿಕಾರಿಗಳನ್ನು ಹೆಚ್.ಡಿ.ರೇವಣ್ಣ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ…

ಆದರೆ, ಈ ಆರೋಪವನ್ನು ಹೆಚ್.ಡಿ.ರೇವಣ್ಣ ತಳ್ಳಿ ಹಾಕಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಮುಂಬಡ್ತಿ ಹಾಗೂ ವರ್ಗಾವಣೆಗೆ ಮನವಿ ಮಾಡುತ್ತಿದ್ದ ಅಧಿಕಾರಿಗಳನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ. ಉಳಿದ ಇಲಾಖೆಗಳ ಹಿರಿಯ ಅಧಿಕಾರಿಗಳ ವರ್ಗಾವಣೆಗೂ ತಮಗೂ ಸಂಬಂಧವಿಲ್ಲ…

ಮುಖ್ಯ ಇಂಜಿನಿಯರ್ ಹಂತದ ಅಧಿಕಾರಿಗಳ ವರ್ಗಾವಣೆ ಅಧಿಕಾರ ಇರುವುದು ಮುಖ್ಯಮಂತ್ರಿಯವರಿಗೆ ಮಾತ್ರ. ಹಾಗಾಗಿ ಮುಖ್ಯಮಂತ್ರಿಯವರ ಶಿಫಾರಸ್ಸಿನಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ನಡೆದಿದೆ ಎಂದು ರೇವಣ್ಣ ಸ್ಪಷ್ಟೀಕರಣ ನೀಡಿದ್ದಾರೆ.ಬಹಳ ದಿನಗಳಿಂದ ವರ್ಗಾವಣೆಗೆ ಕಾಯುತ್ತಿದ್ದವರ ವರ್ಗಾವಣೆ ಮಾತ್ರ ಆಗಿದೆ…

LEAVE A REPLY

Please enter your comment!
Please enter your name here