ಡಿ.ರೂಪಾ ಹಗರಣದಲ್ಲಿ ಭಾಗಿ: ವಿಡಿಯೋ ದಾಖಲೆ ಬಿಡುಗಡೆ ಮಾಡಿದ ರಾಘವೇಂದ್ರ ಶೆಟ್ಟಿ

ಬೆಂಗಳೂರು

ಬೆಂಗಳೂರು: ಕರಕುಶಲ ಅಭಿವೃದ್ದಿ ನಿಗಮದ ಎಂಡಿ ಹಾಗೂ ನಿಗಮದ ಅಧ್ಯಕ್ಷರ ಜಟಾಪಟಿ ಮುಂದುವರಿದಿದೆ. ಮತ್ತೆ ಎಂಡಿ ರೂಪ ಮೇಲೆ ಅಧ್ಯಕ್ಷ ರಾಘವೇಂದ್ರಶೆಟ್ಟಿ ಅವರು ದಾಖಲೆ ಸಮೇತ ವಿಡಿಯೋ ಮಾಡಿ ಕೆಲ ಆರೋಪಗಳ ಸುರಿಮಳೆಗೈದಿದ್ದಾರೆ.

ನಾನು ರೂಪ ಅವರ ಮೇಲೆ ಮಾಡಿದ ಆರೋಪಗಳ ಕುರಿತು ಸರ್ಕಾರದ ಕಾರ್ಯದರ್ಶಿಯಿಂದ ಆರೋಪಗಳ ಉತ್ತರ ಕೋರಿ ರೂಪ ಅವರಿಗೆ ಸೋಕಾಸ್ ನೀಡಲಾಗಿತ್ತು. ಆದರೆ ರೂಪ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಅಲ್ಲದೇ ಒಂದೂವರೆ ವರ್ಷಗಳಿಂದ ಆಫೀಸ್​ಗೆ ಬರದೆ ಸರಿಯಾದ ಕೆಲಸ ಮಾಡದೇ ಕೆಲಸದ ಸಮಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ತಮಗೆ ಮತ್ತು ತಮ್ಮ ಸಿಬ್ಬಂದಿ, ಡ್ರೈವರ್​ಗಳಿಗೆ 9 ತಿಂಗಳ ವೇತನ ರಿಲೀಸ್ ಮಾಡಿಲ್ಲ. ಇನ್ನೂ ವಿವಿಐಪಿ ಹೆಸರಿನ ಶೋರೂಮ್​ನಲ್ಲಿ ಒಂದೂವರೆ ಲಕ್ಷ ಮೌಲ್ಯದ ರಾ ಮೆಟೀರಿಯಲ್ ತೆಗೆದುಕೊಂಡು ಹಣ ಕೊಟ್ಟಿಲ್ಲ.
ಅಲ್ಲದೇ ಒಂದೂವರೆ ಲಕ್ಷ ಮೌಲ್ಯದ ಮೆಟೀರಿಯಲ್ಸ್​ಗೆ 65 ಸಾವಿರ ಕೊಟ್ಟು ಅದರ ಬಗ್ಗೆ ನಿಗಮಕ್ಕೆ ಮಾಹಿತಿ ನೀಡಿಲ್ಲ. ಕರಕುಶಲ ಕರ್ಮಿಗಳಿಗೆ ಬಂದಿದ್ದ ಎರಡೂವರೆಕೋಟಿ ಹಣ ವಾಪಸ್ ಕಳಿಸಿದ್ದು, ಕೇಂದ್ರ ಸರ್ಕಾರದಿಂದ ಬಂದಿದ್ದ ಫಂಡ್ ಕೂಡ ವಾಪಸ್ ನೀಡಿದ್ದಾರೆ ಎಂದು ವಿಡಿಯೋ ಮೂಲಕ ಕರಕುಶಲ ನಿಗಮದ ಎಂಡಿಯಾಗಿರೋ ಡಿ ರೂಪ ವಿರುದ್ದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಯಿಂದ ಆರೋಪ ಮಾಡಿದ್ದಾರೆ.

Leave a Reply

Your email address will not be published.