ತಂದೆಯ ವಿಡಿಯೋ ನೋಡಿ ಗಳಗಳನೇ ಅತ್ತ ಹೆಚ್.ಡಿ ಕುಮಾರಸ್ವಾಮಿ – ರೇವಣ್ಣ..! Video

ಜಿಲ್ಲೆ

ಮಂಡ್ಯ: ಮಂಡ್ಯದಲ್ಲಿ ಪಕ್ಷ ನೆಲೆ ಗಟ್ಟಿ ಮಾಡಿಕೊಳ್ಳಲು ದಳಪತಿಗಳು ಕಸರತ್ತು ನಡೆಸಿದ್ದಾರೆ. ನಾಗಮಂಗಲದಲ್ಲಿ ಶಕ್ತಿ ಪ್ರದರ್ಶನ ಮಾಡು ವ ಜೊತೆ ಜೊತೆಗೆ ತಂದೆ ದೇವೇಗೌಡರ ಅನಾರೋಗ್ಯ ನೆನೆದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಸೋದರರು ವೇದಿಕೆ ಮೇಲೆ ಕಣ್ಣೀರು ಇಟ್ಟಿದ್ದಾರೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಮನೆಯಲ್ಲಿಯೇ ಕುಳಿತು ನಾಗಮಂಗಲ ಕಾರ್ಯಕ್ರಮ ವೀಕ್ಷಿಸುತ್ತಿರುವ ವೀಡಿಯೋವನ್ನು ವೇದಿಕೆಯ ಎಲ್‌ಇಡಿ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾಯ್ತು.

ಈ ದೃಶ್ಯವನ್ನು ನೋಡಿದ ಕೂಡಲೇ ಕುಮಾರಸ್ವಾಮಿ ಮತ್ತು ರೇವಣ್ಣ ಕಂಬನಿ ಮಿಡಿದರು. ಇದಕ್ಕೂ ಮುನ್ನ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗಲೂ ಕುಮಾರಸ್ವಾಮಿ ಕಣ್ಣಲ್ಲಿ ನೀರು ಜಿನುಗಿತ್ತು. ದೇವೇಗೌಡರು ಕಾರ್ಯಕ್ರಮಕ್ಕೆ ಬರಲು ಆಗದ ಸ್ಥಿತಿ ಇದೆ. ಯಾರದೋ ಕೆಟ್ಟ ಕಣ್ಣು ಬಿದ್ದಿದೆ. ನಾನು ಅಳಬಾರದು ಅಂತಾ ಇದ್ದೆ. ಆದರೆ ನಮ್ಮದು ಕಟುಕ ಹೃದಯ ಅಲ್ಲ. ಈ ಕಣ್ಣೀರು ನಾಟಕವೂ ಅಲ್ಲ ಎಂದಿದ್ದಾರೆ. ಮಂಡ್ಯದ ಜನ ನಿಖಿಲ್‌ನನ್ನು ಸೋಲಿಸಲಿಲ್ಲ. ಎದುರಾಳಿಗಳು ಚಕ್ರವ್ಯೂಹದಲ್ಲಿ ಸಿಲುಕಿಸಿ ಸೋಲಿಸಿದ್ರು ಎಂದು ಅಲವತ್ತುಕೊಂಡಿದ್ದಾರೆ.

Leave a Reply

Your email address will not be published.