‘’ಪುಷ್ಪ’’ ಸಿನಿಮಾಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ..! ಯಾರ‍್ಯಾರಿಗೆ ಒಲಿದಿದೆ ಪ್ರತಿಷ್ಠಿತ ಅವಾರ್ಡ್ ಗೊತ್ತಾ..?

ಚಲನಚಿತ್ರ

ನವದೆಹಲಿ: ದಾದಾಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ 2022 ಪ್ರಕಟವಾಗಿದ್ದು, ಅಲ್ಲು ಅರ್ಜುನ್‌ ನಟನೆಯ ಪುಷ್ಪ, ಸಿದ್ಧಾರ್ಥ ಮಲ್ಹೋತ್ರ ನಟನೆಯ ಶೇರ್‌ಶಹಾ, ವಿಕ್ಕಿ ಕೌಶಲ್‌ ಅಭಿನಯದ ಸರ್ದಾರ್‌ ಉದ್ಧಮ್‌ ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ. 1983ರಲ್ಲಿ ಕಪಿಲ್‌ ದೇವ್‌ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಜಯಿಸಿದ ಸಂದರ್ಭ ಆಧಾರಿತ ಚಿತ್ರ ʼ83′ ನಟನೆಗಾಗಿ ರಣವೀರ್‌ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಕೃತಿ ಸನೂನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ʼಪುಷ್ಪʼ ತೆಲುಗು ಸಿನಿಮಾಗೆ ದಕ್ಕಿದೆ.

ವಿಜೇತರ ಪಟ್ಟಿಯ ಸಂಪೂರ್ಣ ವಿವರ:

 • ವರ್ಷದ ಚಲನಚಿತ್ರ – ಪುಷ್ಪ: ದಿ ರೈಸ್
 • ಅತ್ಯುತ್ತಮ ನಟ – ರಣವೀರ್ ಸಿಂಗ್
 • ಅತ್ಯುತ್ತಮ ನಟಿ – ಕೃತಿ ಸನೋನ್
 • ಅತ್ಯುತ್ತಮ ನಿರ್ದೇಶಕ – ಕೆನ್ ಘೋಷ್
 • ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ – ಆಶಾ ಪರೇಖ್
 • ಅತ್ಯುತ್ತಮ ಪೋಷಕ ನಟ – ಸತೀಶ್ ಕೌಶಿಕ್
 • ಅತ್ಯುತ್ತಮ ಪೋಷಕಿ ನಟಿ – ಲಾರಾ ದತ್ತಾ
 • ಅತ್ಯುತ್ತಮ ಖಳ ನಟ – ಆಯುಷ್ ಶರ್ಮಾ
 • ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ – ಸರ್ದಾರ್ ಉದಾಮ್
 • ಅತ್ಯುತ್ತಮ ವಿಮರ್ಶಕ ನಟ – ಸಿದ್ಧಾರ್ಥ್ ಮಲ್ಹೋತ್ರಾ
 • ಅತ್ಯುತ್ತಮ ವಿಮರ್ಶಕಿ ನಟಿ – ಕಿಯಾರಾ ಅಡ್ವಾಣಿ
 • ಜನ ಮೆಚ್ಚಿದ ನಟ – ಅಭಿಮನ್ಯು ದಸ್ಸಾನಿ
 • ಜನ ಮೆಚ್ಚಿದ ನಟಿ – ರಾಧಿಕಾ ಮದನ್
 • ಅತ್ಯುತ್ತಮ ಹೊಸ ನಟಿ – ಅಹಾನ್ ಶೆಟ್ಟಿ
 • ಅತ್ಯುತ್ತಮ ವೆಬ್ ಸಿರೀಸ್​ – ಕ್ಯಾಂಡಿ
 • ಅತ್ಯುತ್ತಮ ವೆಬ್ ಸಿರೀಸ್​ ನಟ – ಮನೋಜ್ ಬಾಜಪೇಯಿ
 • ಅತ್ಯುತ್ತಮ ವೆಬ್ ಸಿರೀಸ್​ ನಟಿ – ರವೀನಾ ಟಂಡನ್
 • ವರ್ಷದ ಅತ್ಯುತ್ತಮ ಧಾರಾವಾಹಿ – ಅನುಪಮಾ
 • ವರ್ಷದ ಅತ್ಯುತ್ತಮ ಧಾರಾವಾಹಿ ನಟ – ಶಾಹೀರ್ ಶೇಖ್
 • ವರ್ಷದ ಅತ್ಯುತ್ತಮ ಧಾರಾವಾಹಿ ನಟಿ – ಶ್ರದ್ಧಾ ಆರ್ಯ
 • ಧಾರಾವಾಹಿಯ ಭರವಸೆಯ ನಟ – ಧೀರಜ್ ಧೂಪರ್
 • ಧಾರಾವಾಹಿಯ ಭರವಸೆಯ ಭರವಸೆಯ ನಟಿ – ರೂಪಾಲಿ ಗಂಗೂಲಿ
 • ಅತ್ಯುತ್ತಮ ಕಿರುಚಿತ್ರ – ಪೌಲಿ
 • ಅತ್ಯುತ್ತಮ ಹಿನ್ನೆಲೆ ಗಾಯಕ – ವಿಶಾಲ್ ಮಿಶ್ರಾ
 • ಅತ್ಯುತ್ತಮ ಹಿನ್ನೆಲೆ ಗಾಯಕಿ – ಕನಿಕಾ ಕಪೂರ್
 • ಅತ್ಯುತ್ತಮ ಛಾಯಾಗ್ರಾಹಕ- ಜಯಕೃಷ್ಣ ಗುಮ್ಮಡಿ

Leave a Reply

Your email address will not be published.