Home Cinema ದೇವಿ ಚಾಮುಂಡಿ ದರ್ಶನ ಪಡೆದ ದರ್ಶನ್ .. ಚಾಮುಂಡಿ ತಾಯಿ ಉತ್ಸವದಲ್ಲಿ  ಬೇಡಿದ್ದೇನು ಅಭಿಮಾನಿಗಳ ದೊರೆ..?

ದೇವಿ ಚಾಮುಂಡಿ ದರ್ಶನ ಪಡೆದ ದರ್ಶನ್ .. ಚಾಮುಂಡಿ ತಾಯಿ ಉತ್ಸವದಲ್ಲಿ  ಬೇಡಿದ್ದೇನು ಅಭಿಮಾನಿಗಳ ದೊರೆ..?

220
0
SHARE

ಮೈಸೂರು. ಚಾಲೆಂಜಿಂಗ್‌ಸ್ಟಾರ್ ದರ್ಶನ್ ಸದ್ಯಕ್ಕೆ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡು ರೆಸ್ಟ್‌ ನಲ್ಲಿರೋದು ಎಲ್ಲರಿಗೂ ಗೊತ್ತೇ ಇದೆ. ಇದರ ಮಧ್ಯೆಯೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿದ್ದಾರೆ. ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ನಟ ದರ್ಶನ್ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದರ್ಶನ್ ಇದೇ ರೀತಿ ಚಾಚೂತಪ್ಪದೇ ದೇವಿಯ ದರ್ಶನ ಪಡೆಯುತ್ತಾರೆ. ಇಂದಿನಿಂದ ಐದು ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ನಿರ್ಭಂಧ ಹೇರಲಾಗಿದೆ. ಆಷಾಢಮಾಸದ ಕಡೇ ಮಂಗಳವಾರ ಕೂಡ ಯಾರಿಗೂ ಪ್ರವೇಶವಿಲ್ಲ. ಹಾಗಾಗೀ ಶುಕ್ರವಾರವೇ ದರ್ಶನ್ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

ಕೊರೋನಾ ಎಫೆಕ್ಟ್ ಹಿನ್ನಲೆಯಲ್ಲಿ ಸ್ಯಾಂಡಲ್‌ವುಡ್ ಸಾರಥಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿರಬಹುದು ಎನ್ನಲಾಗಿದೆ. ಇಡೀ ಚಿತ್ರರಂಗದ ಚಟುವಟಿಕೆಗಳು ಕೊರೋನಾ ಕಾಟದಿಂದ ನಲುಗಿಹೋಗಿರೋ ಬೆನ್ನಲ್ಲೇ ದರ್ಶನ್ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ದರ್ಶನ್ ಸಡನ್ ಎಂಟ್ರಿಗೆ ಭಕ್ತಾಧಿಗಳು ಕೊಂಚ ಎಕ್ಸ್‌ಯಟ್ ಆಗಿಬಿಟ್ರು. ದರ್ಶನ್ ನೋಡಲು ಈ ಸಮಯದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇವುಗಳ ನಡುವೆಯೇ ದರ್ಶನ್ ದೇವಿಯ ದರ್ಶನ ಪಡೆದು ಹಿಂತಿರುಗಿದ್ದಾರೆ.

ಚಾಮುಂಡೇಶ್ವರಿ ಭಕ್ತನಾಗಿರೋ ದರ್ಶನ್ ಕೊರೋನಾ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದಿರುವ ವಿಷಯ ಡಿ ಬಳಗದಲ್ಲಿ ಹೊಸ ಪುಳಕ ಹುಟ್ಟಿಸಿದೆ. ಒಂದು ಕಡೇ ಚಿತ್ರರಂಗದ ಪ್ರಸ್ತುತ ಬೆಳವಣಿಗೆಗಳನ್ನ ನೋಡ್ತಿದ್ರೆ ಏನು ಸರಿಯಿಲ್ಲ ಎನ್ನುವ ಪರಿಸ್ಥಿತಿಯಿದೆ. ಇನ್ನೊಂದು ಕಡೇ ಕನ್ನಡದ ಘಟನುಘಟಿ ಸ್ಟಾರ್‌ಗಳ ಸಿನಿಮಾಗಳೇ ಚಿತ್ರರಂಗದ ವ್ಯವಹಾರಗಳನ್ನ ಮೇಲೆತ್ತುವ ಅನಿವಾರ್ಯತೆಯಿದೆ. ಇದಕ್ಕಾಗಿಯೇ ದರ್ಶನ್ ಚಾಮುಂಡೇಶ್ವರಿ ದೇವಿಯ ಆರ್ಶಿವಾದ ಪಡೆದುಕೊಂಡಿದ್ದಾರೆ. ಸಿನಿಮಾ ಚಟುವಟಿಕೆಗಳ ಜೊತೆಗೆ ಸ್ಯಾಂಡಲ್‌ವುಡ್ ಸುರಕ್ಷಿತವಾಗಿರಲಿ ಎಂಬುದೇ ಕರುನಾಡ ದಾಸನ ಬಯಕೆಯಾಗಿದೆ.

ಹೌದು. ಕನ್ನಡ ಚಿತ್ರರಂಗ ಈ ಪರಿಸ್ಥಿತಿಯಲ್ಲಿ ನಾನಾ ಕಷ್ಟಗಳನ್ನ ಅನುಭವಿಸುತ್ತಿದೆ. ಎಲ್ಲವೂ ಅಂದುಕೊಂಡತೇ ಆಗಿದ್ರೆ ದರ್ಶನ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ರಾಬರ್ಟ್ ಚಿತ್ರಮಂದಿರಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಡಬೇಕಾಗಿತ್ತು. ಆದರೆ ಚಿತ್ರರಂಗ ಎಂದಿನಂತೆ ಈ ಸಮಯದಲ್ಲೂ ಆಕ್ಟಿವ್ ಆಗಿ ಕೆಲಸ ನಿರ್ವಹಿಸೋಕೆ ಸಾಧ್ಯವಾಗ್ತಿಲ್ಲ. ಡೆಡ್ಲಿ ಕೊರೋನಾ ಎಫೆಕ್ಟ್‌ನಿಂದ ಕಂಗಲಾಗಿರೋ ಚಿತ್ರೋದ್ಯಮ ಸುಧಾರಿಸಿಕೊಳ್ಳಲು ಚಂದನವನದ ತಾರೆಯರು ಮನಸ್ಸಿನಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ದಾಸನ ಪ್ರಾರ್ಥನೆ ಕೂಡ ಈಡೇರಲಿ ಎನ್ನುವುದೇ ಅಭಿಮಾನಿಗಳ ಆಸೆಯಾಗಿದೆ.

ಅಂತೂ ದರ್ಶನ್ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿರೋದು ಚಿತ್ರರಂಗದ ಕಣ್ಣಿಗಂತೂ ಶುಭಸೂಚಕದಂತೆ ಕಾಣಿಸ್ತಿದೆ. ಕೆಟ್ಟ ಸಮಯ ಕಳೆದು ಪರ್ವಕಾಲ ಶುರುವಾಗಲಿ ಎಂನ್ನುತ್ತ ಚಿತ್ರಪ್ರೇಮಿಗಳು ಹಾಗೂ ಚಿತ್ರರಂಗವೂ ದೇವರಿಗೆ ಕೈ ಮುಗಿದಿದೆ. ಕೊರೋನಾ ಕಷ್ಟಕಾಲದಲ್ಲಿ ಕಲಾವಿದರು ಹಾಗೂ ತಂತ್ರಜ್ಞರ ಬಾಳು ಅಸ್ತವ್ಯಸ್ತಗೊಂಡಿದೆ. ಎಲ್ಲವೂ ಮತ್ತೆ ಮೊದಲಿನಂತಾಗಲಿ ಎನ್ನುವ ಪ್ರಾರ್ಥನೆಯೂ ಈ ಸಂದರ್ಭದಲ್ಲಿ ಜೋರಾಗಿದೆ. ಆ ಚಾಮುಂಡೇಶ್ವರಿ ಕೃಪೆಯಿದ್ದರೆ ಕೊರೋನಾ ಬಹಳ ಬೇಗ ನಮ್ಮೆಲ್ಲರ ಬದುಕಿನಿಂದ ತೊಲಗಿಹೋಗುತ್ತೆ ಎನ್ನುವುದೇ ಡಿ ಬಳಗದ ಆಶಯವೂ ಆಗಿದೆ. ಜೊತೆಗೆ ರಾಬರ್ಟ್ ಸಿನಿಮಾ ಕೂಡ ಅದಷ್ಟುಬೇಗ ಚಿತ್ರಮಂದಿರಗಳಲ್ಲಿ ಆರ್ಭಟಿಸಲಿ ಎನ್ನುವ ಆಸೆ ಇಲ್ಲಿ ಎದ್ದುಕಾಣ್ತಿದೆ.

LEAVE A REPLY

Please enter your comment!
Please enter your name here