ದಸರಾ ಗಜಪಯಣಕ್ಕೆ ಚಾಲನೆ ನೀಡುವಾಗ ಎಡವಟ್ಟು: ಶೂ ಧರಿಸಿ ಪೂಜೆ ಸಲ್ಲಿಸಿದ ಉಮೇಶ್ ಕತ್ತಿ

ಜಿಲ್ಲೆ

ಮೈಸೂರು: ಇಂದು ವಿಶ್ವವಿಖ್ಯಾತ ದಸರಾ ಮಹೋತ್ಸವದ ನಿಮಿತ್ತ ಕಾಡಿನಿಂದ ನಾಡಿಗೆ ಗಜಪಡೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ದಸರಾ ಗಜಾಪಡೆಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವಾಗ ಅರಣ್ಯ ಸಚಿವ ಉಮೇಶ್ ಕತ್ತಿ ಶೂ ಹಾಕಿಕೊಂಡೆ ಪೂಜೆ ಸಲ್ಲಿಸಿದ್ದಾ ರೆ.ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಗಜಪಡೆಗೆ ಸ್ವಾಗತ ಕಾರ್ಯಕ್ರಮ ನಡೆದಿದೆ. ಈ ವೇಳೆ ಸಚಿವ ಎಸ್.ಟಿ. ಸೋಮಶೇಖರ್, ಸಚಿವ ಉಮೇಶ್ ಕತ್ತಿ ಅವರು ಪೂಜೆ ಸಲ್ಲಿಸಿದ್ದರು. ಆದರೆ ಸಚಿವ ಉಮೇಶ್ ಕತ್ತಿ ಅಂಬಾರಿ ಆನೆ ಅಭಿಮನ್ಯುಗೆ ಶೂ ಹಾಕಿಕೊಂಡೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಕಬ್ಬು, ಕಡಬು ತಿನ್ನಿಸಿದ್ದಾರೆ.

ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಹೆಚ್.ಪಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಮಂಜೇಗೌಡ ಹಾದಿಯಾಗಿ ಎಲ್ಲರೂ ಶೂ, ಚಪ್ಪಲಿ ಬಿಚ್ಚಿ ಪೂಜೆ ಸಲ್ಲಿಸಿದರು. ಸಂಪ್ರದಾಯವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ. ಆದರೆ ಉಮೇಶ್ ಕತ್ತಿ ಎಲ್ಲವನ್ನೂ ಗಾಳಿಗೆ ತೂರಿ ಶೂ ಧರಿಸಿ ಪೂಜೆ ಸಲ್ಲಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಒಟ್ಟಾರೆಯಾಗಿ ನಾಡಹಬ್ಬದ ಮೊದಲ ಅಧಿಕೃತ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗಿದೆ.

ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಕಾಲಿಟ್ಟಿದೆ. 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, 63 ವರ್ಷದ ಅರ್ಜುನ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ 18 ವರ್ಷದ ಪಾರ್ಥಸಾರಥಿ ಆನೆಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

 

Leave a Reply

Your email address will not be published.