ಮಗಳ ಮದುವೆಗೆ ಕೂಡಿಟ್ಟಿದ್ದ ಹಣ ಕಳ್ಳರ ಪಾಲು: ಬರೋಬ್ಬರಿ 12 ಲಕ್ಷ ಖನ್ನ

ಬೆಂಗಳೂರು

ಅನೇಕಲ್: ಮಗಳ ಮದುವೆ ಮಾಡಲು ಕೂಡಿಟ್ಟಿದ್ದ ಹಣವನ್ನು ಕಳೆದ ರಾತ್ರಿ ಬೀಗ ಜಡಿದು  ಕಳ್ಳತನ ಎಸಗಿರುವ ಘಟನೆ ಆನೇಕಲ್ ತಾಲೂಕಿನ ವೆಂಕಟೇಶ್ವರ ಟಾಕೀಸ್ ಹತ್ತಿರ ಮಯೂರ ಬೇಕರಿ ಹಿಂಭಾಗ ನಡೆದಿದೆ. ಆನೇಕಲ್ ಮೂಲದ ಮಂಜುನಾಥ್ ಎಂಬುವವರ ಮನೆಯಲ್ಲಿ ನಡೆದಿರುವ ಕೃತ್ಯ ಇನ್ನು ಕದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಇನ್ನು ಮಂಜುನಾಥ್ ತಳ್ಳುವ ಗಾಡಿಯಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿದ್ದಾರೆ . ನೆನ್ನೆ ಬೆಳಗಿನ‌ಜಾಗ  3:00 ಗಂಟೆಗೆ  ಕುಟುಂಬಸ್ಥರ ಜೊತೆ ಸೇರಿ ದೇವಸ್ಥಾನಕ್ಕೆ  ಹೋಗಿದ್ದರಂತೆ.

ದರ್ಶನ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ವಸ್ತುಗಳು  ಚೆಲ್ಲಾಪಿಲ್ಲಿಯಾಗಿದ್ದವು .ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಮನೆಯಲ್ಲಿದ್ದ  ಸುಮಾರು 8ಲಕ್ಷ  ಒಡವೆ 3 ಲಕ್ಷ 75ಸಾವಿರ ನಗದು ಕದ್ದು  ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಮಂಜುನಾಥ್ ಹಾಗೂ ಕುಟುಂಬದವರು ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ. ಇನ್ನೂ ಘಟನಾಸ್ಥಳಕ್ಕೆ  ಆನೇಕಲ್ ಪೊಲೀಸರು ಸ್ಮಮ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Reply

Your email address will not be published.