Home Crime ಸ್ಮಶಾನದ ದಾರಿ ನುಂಗಿದ ಗ್ರಾಮಸ್ಥರು; ಸ್ಮಶಾನದ ದಾರಿಯಲ್ಲಿ ಶವದ ಪರದಾಟ!

ಸ್ಮಶಾನದ ದಾರಿ ನುಂಗಿದ ಗ್ರಾಮಸ್ಥರು; ಸ್ಮಶಾನದ ದಾರಿಯಲ್ಲಿ ಶವದ ಪರದಾಟ!

1353
1

ದಾವಣಗೆರೆ; ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ದಾರಿಗಳನ್ನು ಅತಿಕ್ರಮಣ ಮಾಡಲಾಗಿದೆ. ಇದರ ಪರಿಣಾಮವಾಗಿ ಸ್ಮಶಾನಕ್ಕೆ ಶವ ಕೊಂಡೊಯ್ಯಲು ಮೃತರ ಸಂಬಂಧಿಗಳು ಹರಸಾಹಸವನ್ನೇ ಎದುರಿಸಬೇಕಾಗಿದೆ. ಈ ರೀತಿಯ ದೇಶ್ಯ ಕಂಡು ಬಂದಿದ್ದು ದಾವಣಗೆರೆ ತಾಲೂಕಿನ ಗಿರಿಯಾಪುರ‍ ಗ್ರಾಮದಲ್ಲಿ. ಅಂತ್ಯಕ್ರಿಯೆಗೆ ದುಸ್ಥಿತಿ ಎದುರಾಗಿದೆ ಎಂದೇ ಹೇಳಬಹುದು.

ದಾವಣಗೆರೆ ತಾಲೂಕಿನ ಗಿರಿಯಾಪುರ‍ಗ್ರಾಮದಿಂದ 2 ಕಿಮೀ ದೂರವಿರುವ ಸ್ಮಶಾನವು ಅತಿಕ್ರಮಣವಾಗಿರಿವುದು ಅನೇಕರಿಗೆ ಕಷ್ಟವನ್ನುಂಟುಮಾಡಿದೆ. ಸ್ಮಶಾನಕ್ಕೆ ಹೋಗಲು ಬೇರೆ ದಾರಿಯಿಲ್ಲದೇ ಕೆಸರು ಗದ್ದೆಯಲ್ಲೇ ಎದ್ದು ಬಿದ್ದು ಹೆಣವನ್ನು ಹೊರುವ ದುಸ್ಥಿತಿ ಎದುರಾಗಿದೆ. ಶವ ಹೊತ್ತೊಯ್ಯುವಾಗ ಗದ್ದೆಯಲ್ಲಿ ಕುಸಿದು ಬಿದ್ದ ಘಟನೆಗಳೂ ಕೂಡಾ ನಡೆದಿರುವುದು ಒಂದು ಬೇಸರಕರ ಸಂಗತಿ ಎಂದೇ ಹೇಳಬಹುದು. ಹಲವು ಬಾರಿ ದೂರು ನೀಡಿದರೂ ಕೂಡಾ ದೂರಿಗೆ ಪ್ರತಿಕ್ರಯಿಸದ ಮತ್ತು ಓಡಾಟಕ್ಕೆ ಜಾಗ ಮಾಡಿಕೊಡದ ಗ್ರಾಮ ಪಂಚಾಯತಿ ಅಧಿಕಾರಿಗಳು.

ಅದೇನೇ ಇದ್ದರೂ ಈ ಎಲ್ಲಾ ಕಾರಣಗಳಿಂದಾಗಿ ಶವ ಸಂಸ್ಕಾರ ಮಾಡುವ ಕಾರ್ಯದಲ್ಲಿ ಬೇಸತ್ತು ಹೋಗಿರುವ ಗ್ರಾಮಸ್ಥರು. ಗ್ರಾಮಸ್ಥರಿಂದ ಸ್ಮಶಾನ ರಸ್ತೆ ಅತಿಕ್ರಮಣ ಮಾಡಿಕೊಂಡಿರುವ ಆರೋಪ ಕೇಳಿಬರುತ್ತಿದೆ.

Previous articleನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಕುರಿತು ಮೆಜೆಸ್ಟಿಕ್ ನಿಂದ ಪ್ರಜಾಟಿವಿ ನೇರ ವರದಿ
Next articleನಮ್ಮ ದೇಶ ಅಭಿವೃದ್ಧಿ ಕಂಡಿದ್ದೇನಾದರೂ ಇದ್ದರೆ, ಅದು ವಾಜಪೇಯಿ ಮತ್ತು ಮೋದಿ ಅವರ ಆಡಳಿತಾವಧಿಯಲ್ಲಿ ಮಾತ್ರ: ಜಗದೀಶ್ ಶೆಟ್ಟರ್

1 COMMENT

LEAVE A REPLY

Please enter your comment!
Please enter your name here