Home District ಡಿಸಿ ರೋಹಿಣಿ ಸಿಂಧೂರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್,ಜಿಮ್ ನಿರ್ಮಾಣ!: ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಆರೋಪ

ಡಿಸಿ ರೋಹಿಣಿ ಸಿಂಧೂರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್,ಜಿಮ್ ನಿರ್ಮಾಣ!: ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಆರೋಪ

1178
0

ಮೈಸೂರು : ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಸ್ವಿಮ್ಮಿಂಗ್​ ಪೂಲ್​ ಮತ್ತು ಜಿಮ್ ನಿರ್ಮಾಣ ಮಾಡಲಾಗಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್​ ಮುಖಂಡ ಕೆ.ವಿ.ಮಲ್ಲೇಶ್​ ಗಂಭೀರ ಆರೋಪ ಮಾಡಿದ್ದಾರೆ. ​

ಡಿಸಿ  ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ನಿರ್ಮಾಣ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹ ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು?ಸ್ಮಿಮ್ಮಿಂಗ್ ಪೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಿದ್ದೀರಿ ಬಹಿರಂಗಪಡಿಸಿ. ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ  ಯಾರಾದಾದರೂ ಸ್ಪಾನ್ಸರ್ ಪಡೆದುಕೊಂಡು ಕಟ್ಟಿಸಿದ್ದೀರಾ? ಮೊದಲು ಇದನ್ನು ಬಹಿರಂಗ ಪಡಿಸಿ ಎಂದು ಮಲ್ಲೇಶ್​ ಜರಿದಿದ್ದಾರೆ.

ನೀವೇನಾದ್ರೂ ಸ್ವಿಮ್ಮಿಂಗ್ ಪಟು ಆಗಿದಿರಾ? ಕೊರೊನಾ ಕಾಲದಲ್ಲಿ ದಿನದ 24 ಗಂಟೆ ಕಾಲ ಕೆಲಸ ಮಾಡುತ್ತೇನೆಂದು ಹೇಳ್ತೀರಿ. ಹಾಗಾದ್ರೆ ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತೆ? ಜನ ಪರವಾಗಿ ಚಿಂತಿಸುವ ಡಿಸಿ ಇಂತಹ ಕೆಲಸ ಮಾಡ್ತಾರಾ? ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ ಎಂದರು.

ನಾನು ಆರ್.ಟಿ.ಐ. ಮೂಲಕ ಮಾಹಿತಿ ಬಯಸುವೆ. ನೀವು ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು. ಜನರಿಗೆ ಒಳ್ಳೆಯದು ಮಾಡಲು ಆಗಲ್ಲ ಅಂದ್ರೆ ಮೈಸೂರಿನಿಂದ ನಿರ್ಗಮಿಸಿ.ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡ್ರೂ ನಿಮ್ಮ ಬಳಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಜನರ ಕೈಗೆ ನೀವು ಸಿಗಲ್ಲ‌ ಎಂದು ಆರೋಪ ಮಾಡಿದರು.

Previous articleಬೇಕಾಬಿಟ್ಟಿ ಓಡಾಡುವವರಿಗೆ ತುಮಕೂರು ಪೊಲೀಸರ ಶಾಕ್!
Next articleಕೊರೋನಾ ನಡುವೆ ರೋಹಿಣಿ ಸಿಂಧೂರಿಗೆ ಬೇಕಿತ್ತಾ ಈ ಶೋಕಿ?

LEAVE A REPLY

Please enter your comment!
Please enter your name here