ಡಿಸಿಎಂ ಪರಮೇಶ್ವರ್ ರಾಜಕಾಲುವೆ ಪರಿಶೀಲನೆ ವೇಳೆ ದರ್ಪ ಮೆರೆದಿದ್ದಾರೆ. ರಾಜಕಾಲುವೆ ಪರಿಶೀಲನೆ ಮಾಡುತ್ತಿದ್ದ ವೇಳೆ ಬಟ್ಟೆ ಕೊಳೆ ಆಗಿದ್ದಕ್ಕೆ ಗನ್ ಮ್ಯಾನ್ ಕರೆಸಿಕೊಂಡು ಬಟ್ಟೆಯನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ. ಡಿಸಿಎಂ ಆದೇಶಕ್ಕೆ ತಲೆಬಾಗಿ ಗನ್ ಮ್ಯಾನ್ ತಕ್ಷಣವೇ ಎಲ್ಲರ ಸಮ್ಮುಖದಲ್ಲಿ ಖರ್ಚೀಫ್ನಿಂದ ಬಟ್ಟೆ ಕ್ಲೀನ್ ಮಾಡಿದ್ದಾರೆ.
ಇತ್ತ ಡಿಸಿಎಂ ನಾಮಕಾವಸ್ಥೆಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಹೋದಲೆಲ್ಲಾ ಸನ್ಮಾನಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಸ್ಥಳೀಯರ ಸಮಸ್ಯೆಗಳನ್ನು ಆಲಿಸಬೇಕಿದ್ದ ಡಿಸಿಎಂ ಸಿಟಿ ರೌಂಡ್ಸ್ ಮಾಡಬೇಕೆಲ್ಲಾ ಎಂದುಕೊಂಡು ಮಾಡುತ್ತಿದ್ದಾರೆ ಎಂಬುದಕ್ಕೆ ಅವರು ನಡೆದುಕೊಳ್ಳುತ್ತಿರುವುದೇ ಸಾಕ್ಷಿಯಾಗಿದೆ.
ಡಿಸಿಎಂ, ನಗರ ಉಸ್ತುವಾರಿ ಸಚಿವರ ಎರಡನೇ ದಿನದ ಸಿಟಿ ರೌಂಡ್ಸ್ ಪ್ರಾರಂಭ.ಹಲಸೂರು ಗುರುದ್ವಾರದ ಮಳೆ ನೀರುಗಾಲುವೆಗೆ ಮೊದಲ ಭೇಟಿ.ಡಿಸಿಎಂ ಪರಮೇಶ್ವರ್ ಜೊತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಸಾತ್.ಬಿಬಿಎಂಪಿ ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್, ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳ ಉಪಸ್ಥಿತಿ. ಹಲಸೂರು ಬಳಿಯಿರೋ ಬಿಡಿಎ ಸಮುಚ್ಚಯಕ್ಕೆ ಭೇಟಿ.
ಶಿಥಿಲಾವಸ್ಥೆ ತಲುಪಿರೋ ಕಟ್ಟಡ.ಡ್ರೈನೇಜ್ ವಾಟರ್ ಸಮಸ್ಯೆ ಹೇಳಿಕೊಂಡ ಜನರು.ಯಾವುದೇ ಸಮಯದಲ್ಲೂ ಕಟ್ಟಡ ಬೀಳಬಹುದು.ಹೊಸದಾಗಿ ಕಟ್ಟಡ ಕಟ್ಟಿಸಿಕೊಡುವಂತೆ ಡಿಸಿಎಂಗೆ ಮನವಿ. ನಾಮಕಾವಸ್ಥೆ ಎನ್ನುವಂತಾದ ಪರಂ ಸಿಟಿರೌಂಡ್ಸ್.ಹೋದಲೆಲ್ಲಾ ಹಾರ ಹಾಕಿಸಿ ಸನ್ಮಾನ ಮಾಡಿಸಿಕೊಳ್ತಿರೋ ಡಿಸಿಎಂ.
ಪರಿಶೀಲನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಭವ್ಯ ಸ್ವಾಗತ.ಹೂ ಗುಚ್ಚ ನೀಡಿ ಸ್ವಾಗತಕಷ್ಟೇ ಸೀಮಿತವಾಗ್ತಿರೋ ಸಿಟಿರೌಂಡ್ಸ್ನಾಮಕಾವಸ್ಥೆ ಎನ್ನುವಂತಿರೋ ಪರಂ ಸಿಟಿರೌಂಡ್ಸ್.ಸ್ಥಳಿಯರಿಂದ ಸಮಸ್ಯೆ ಆಲಿಸದೇ ಸಾಗ್ತಿರೋ ಪರಂ.