Home Crime ಕೆಲಸಕ್ಕೆ ಹೊರಟವರು ಸೇರಿದ್ದು ಮಸಣಕ್ಕೆ; ಅದು ಹೇಗೆ ಗೊತ್ತೇ?

ಕೆಲಸಕ್ಕೆ ಹೊರಟವರು ಸೇರಿದ್ದು ಮಸಣಕ್ಕೆ; ಅದು ಹೇಗೆ ಗೊತ್ತೇ?

451
0

ಯಾದಗಿರಿ: ಆ ಮಹಿಳೆಯರು ನಿತ್ಯ ದುಡಿದು ಬದುಕುವ ಜನ. ಬೆಳಿಗ್ಗೆ ಆದ್ರೆ ಸಾಕು ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ರು. ಕೆಲಸಕ್ಕೆ ಹೋಗಲು ಟಂಟಂ ಹತ್ತಿ ಹೋಗ್ತಾಯಿದ್ರು. ಆದ್ರೆ ಮಾರ್ಗಮಧ್ಯದಲ್ಲೇ ರೈತಕಾರ್ಮಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕೆಲಸಕ್ಕೆ ತೆರಳುತ್ತಿದ್ದವರು ಮಸಣ ಸೇರಿದ್ದಾರೆ.

ಬೆಳ್ಳಂಬೆಳಗ್ಗೆ ಅಟ್ಟಹಾಸ ಮೆರೆದ ಜವರಾಯ. ಕೂಲಿ ಕೆಲಸಕ್ಕೆ ಹೊರಟ 10 ಮಂದಿಯಲ್ಲಿ ಐವರು ನಡು ರಸ್ತೆಯಲ್ಲೇ ಉಸಿರು ಚೆಲ್ಲಿದ್ದಾರೆ. ಐವರ ಸ್ಥಿತಿ ಚಿಂತಜನಕವಾಗಿದೆ. ಈ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಶಹಾಪುರದ ಕೊಳ್ಳೂರು ರಾಜ್ಯ ಹೆದ್ದಾರಿಯಲ್ಲಿ. ಮೃತರೆಲ್ಲರು ವಡಗೇರ ತಾಲೂಕಿನ ಮುನಮುಟಗಿ ಗ್ರಾಮದವರು.

ಮೃತರು ನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ರು. ಎಂದಿನಂತೆ ಮುನಮುಟಗಿ ಗ್ರಾಮದಿಂದ ಟಂಟಂ ಏರಿ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಹೊವಿನಹಡಗಿ ಗ್ರಾಮಕ್ಕೆ ಮೆಣಸಿನ ಕಾಯಿ ಬಿಡಿಸುವ ಕೆಲಸಕ್ಕೆ ತೆರಳುತ್ತಿದ್ರು. ಆದ್ರೆ ದೇವದುರ್ಗ ಕಡೆಯಿಂದ ಶಹಾಪುರ ಕಡೆಗೆ ರಭಸವಾಗಿ ಬರ್ತಾಯಿದ್ದ ಸಿಮೆಂಟ್ ಮಿಕ್ಸರ್ ವಾಹನ ಟಂಟಂಗೆ ಡಿಕ್ಕಿಯಾಗಿದೆ. ಅಪ್ಪಳಿಸಿದ ರಭಸಕ್ಕೆ ಟಂಟಂ ನಲ್ಲಿದ್ದ 10 ಮಂದಿಯಲ್ಲಿ ಐವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ ಐವರ ಸ್ಥಿತಿಯೂ ಗಂಭಿರವಾಗಿದೆ. ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಲ್ಲಿ ಮೃತಪಟ್ಟವರನ್ನ ಆಯ್ಯಮ್ಮ, ಶರಣಮ್ಮ, ಭೀಮಬಾಯಿ,,ಕಾಸೀಂಬೀ, ದೇವಿಂದ್ರ ಎಂದು ಗುರುತಿಸಲಾಗಿದೆ. ಶಹಪೂರ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳನ್ನ ಪೊಲೀಸರು ರವಾಸಿದ್ದಾರೆ. ಇನ್ನು ಅಪಘಾತ ಸುದ್ದಿ ತಿಳಿದ ತಕ್ಷಣ ಮೃತರ ಸಂಬಂಧಿಕರು ಹಾಗೂ ಮುನಮುಟಗಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ರು. ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಇತ್ತ ಘಟನೆ ಬಳಿಕ ಟಂಟಂ ಹಾಗೂ ಸಿಮೆಂಟ್ ಮಿಕ್ಸರ್ ವಾಹನದ ಚಾಲಕರು ಪರಾರಿಯಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡವರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

ಒಟ್ಟಿನಲ್ಲಿ ಹೊಟ್ಟೆ ಪಾಡಿಗಾಗಿ ದುಡಿಯಲು ಹೋಗುತ್ತಿದ್ದ ಮಹಿಳೆಯರು ಟ್ಯಾಂಕರ್ ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಮುನಮುಟಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Previous articleಶ್ರೀ ರಾಮನವಮಿ ಆಚರಣೆಯ ವಿಶೇಷತೆ ಏನು ಗೊತ್ತೇ?
Next articleಕೊಡಗು ಜಿಲ್ಲೆಯ ಹಲವೆಡೆ ವರ್ಷಧಾರೆ; ವರುಣನ ಆರ್ಭಟಕ್ಕೆ ಜನಜೀವನ ತತ್ತರ

LEAVE A REPLY

Please enter your comment!
Please enter your name here