Home Crime ಕೊರೋನಾ ಮಹಾಮಾರಿ; ಸಾವಿನ ಮನೆಯಾಗಿ ಬದಲಾದ ಚಾಮರಾಜನಗರ!

ಕೊರೋನಾ ಮಹಾಮಾರಿ; ಸಾವಿನ ಮನೆಯಾಗಿ ಬದಲಾದ ಚಾಮರಾಜನಗರ!

ಕೊರೋನಾ ಮಹಾಮಾರಿ; ಸಾವಿನ ಮನೆಯಾಗಿ ಬದಲಾದ ಚಾಮರಾಜನಗರ!

466
0

ವರದಿ: ಅಶ್ವಥ್ ಕುಮಾರ್

ಶನಿವಾರ ಚಾಮರಾಜನಗರ ಜಿಲ್ಲೆಯಲ್ಲಿ 667 ಮಂದಿ ಕೋರೊನಾ ದೃಡ – 4186 ಸಕ್ರಿಯ ಪ್ರಕರಣ. ಶನಿವಾರ 5 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ. ಶುಕ್ರವಾರ 1549 ಮಂದಿಗೆ ಲಸಿಕೆ ಇದೂವರೆಗೂ 163054 ಮಂದಿಗೆ ಲಸಿಕೆ.

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಶುಕ್ರವಾರ ಕರಾಳವೆನಿಸಿದೆ.

ಶನಿವಾರ ಒಂದೇ ದಿನ 667 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದಐವರು ಮಂದಿ ಸಾವನ್ನಪ್ಪಿದ್ದು ಇದೂವರೆಗೂ 225 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 4186 ಕ್ಕೇರಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಶನಿವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 493 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 11204 ಮಂದಿ ಗುಣಮುಖರಾಗಿದ್ದಾರೆ . ಶನಿವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 631 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 36 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಶನಿವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 667 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 288 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 139 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 120 , ಹನೂರು ತಾಲ್ಲೂಕಿನಲ್ಲಿ 53 , ಯಳಂದೂರು ತಾಲ್ಲೂಕಿನಲ್ಲಿ 67 ಮಂದಿ ಸೇರಿ 667 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಶುಕ್ರವಾರ 1549 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 163054 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ಪಟ್ಟಣದ 62 ವರ್ಷದ ಪುರುಷ, ತಾಲ್ಲೂಕಿನ ಮಂಗಲ ಗ್ರಾಮದ 65 ವರ್ಷದ ಮಹಿಳೆ ಅಮಚವಾಡಿ ಗ್ರಾಮದ 75 ವರ್ಷದ ಪುರುಷ, ಗುಂಡ್ಲುಪೇಟೆ ಪಟ್ಟಣದ 42 ವರ್ಷದ ಪುರುಷ, ತಾಲ್ಲೂಕಿನ ಮಲ್ಲಮ್ಮನಹುಂಡಿ ಗ್ರಾಮದ 60 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಇದೂವರೆಗೂ 225 ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಕೊರೋನಾ ಮಹಾಮಾರಿ; ಸಾವಿನ ಮನೆಯಾಗಿ ಬದಲಾದ ಚಾಮರಾಜನಗರ!
SOURCEಕೊರೋನಾ ಮಹಾಮಾರಿ; ಸಾವಿನ ಮನೆಯಾಗಿ ಬದಲಾದ ಚಾಮರಾಜನಗರ!
Previous articleಕೋವಿಡ್ ಸೆಂಟರ್ ಗೆ ದಾಖಲಾಗಲು ವರದಿ ಕಡ್ಡಾಯವಲ್ಲ; ಕೇಂದ್ರ ಸರ್ಕಾರ
Next articleದೇಶಕ್ಕೆ ಮೋದಿಯವರ ಕೊಡುಗೆ ಏನು…!? ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಸಿದ್ದರಾಮಯ್ಯ ಪ್ರಶ್ನೆ

LEAVE A REPLY

Please enter your comment!
Please enter your name here