ಪದವಿ & ಪಿಯು ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯ: ಹೈಕೋರ್ಟ್ ತ್ರಿಸದಸ್ಯ ಪೀಠದ ಆದೇಶ

ಬೆಂಗಳೂರು

ಬೆಂಗಳೂರು: ಧಾರ್ಮಿಕ ಉಡುಪು ಧರಿಸುವುದನ್ನು ನಿಷೇಧಿಸಿರುವ ನಮ್ಮ ಆದೇಶವು ಪದವಿ ಕಾಲೇಜುಗಳು ಮತ್ತು ಪಿಯು ಕಾಲೇಜು ಗಳಿಗೆ ಅನ್ವಯಿಸುತ್ತದೆ ಎಂದು ರಾಜ್ಯ ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಿಜಾಬ್ ನಿಷೇಧ ಪ್ರಕರಣದ ಬುಧವಾರದ ವಿಚಾರಣೆಯ ಕೊನೆ ಯಲ್ಲಿ ತ್ರಿಸದಸ್ಯ ಪೀಠವು ಈ ಸ್ಪಷ್ಟೀಕರಣವನ್ನು ಮಾಡಿದೆ. ಸಮವಸ್ತ್ರವನ್ನು ಶಿಫಾರಸು ಮಾಡಿದರೆ ಅದನ್ನು ಅನುಸರಿಸಬೇಕು. ಅದು ಪದವಿ ಕಾಲೇಜು ಅಥವಾ ಪಿಯು ಕಾಲೇಜು ಆಗಿರಲಿ. ಎಲ್ಲಿ ಸಮವಸ್ತ್ರವನ್ನು ಶಿಫಾರಸು ಮಾಡಲಾಗುತ್ತದೆಯೋ ಅಲ್ಲಿ ಅದನ್ನು ಅನುಸರಿಸಬೇಕು ಎಂದು ಮುಖ್ಯ ನ್ಯಾಯಾಧೀಶರು ಸೂಚಿಸಿದ್ದಾರೆ.

Leave a Reply

Your email address will not be published.