Home Elections 2019 Dehli ಕೆಂಪುಕೋಟೆಯಲ್ಲಿ ಪ್ರಧಾನಿ Modi ಧ್ವಜಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಾರತೀಯರು…ವೀರಯೋಧರು, ನಾಡಿನ ಜನರಿಗೆ ನಮೋ...

Dehli ಕೆಂಪುಕೋಟೆಯಲ್ಲಿ ಪ್ರಧಾನಿ Modi ಧ್ವಜಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಾರತೀಯರು…ವೀರಯೋಧರು, ನಾಡಿನ ಜನರಿಗೆ ನಮೋ ನಮನ…

3434
0
SHARE

ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ 2022ರಲ್ಲಿ ಮಾನವ ಸಹಿತ ಗಗನಯಾನ ಯೋಜನೆ ಘೋಷಣೆ ಮಾಡಿದ್ದಾರೆ. ಬಾಹ್ಯಕಾಶಕ್ಕೆ ಮಾನವ ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ ಎಂದು ಅವರು ತಿಳಿಸಿದ್ದಾರೆ.ಇನ್ನು, ಸರ್ಕಾರದ ಸಾಧನೆಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಭಾರಿ ಬದಲಾವಣೆಯಾಗಿದೆ.ಎಲ್ಲಾ ಕುಟುಂಬ ಮನೆಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಮನೆಗಳಿಗೂ ಎಲ್‌ಪಿಜಿ ಗ್ಯಾಸ್ ಪೂರೈಸಿದ್ದೇವೆ.ಜನರಿಗೆ ನೀಡಿದ ಭರವಸೆಯನ್ನು ಸಂಪೂರ್ಣಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಳ್ಳಿ ಹಳ್ಳಿಗೂ ಮನೆ, ರಸ್ತೆ ನಿರ್ಮಾಣ ಮಾಡಲಾಗಿದೆ.

ದೇಶದಲ್ಲಿ ದಾಖಲೆಯ ಮೊಬೈಲ್​ ಫೋನ್​ಗಳ ಉತ್ಪಾದನೆಯಾಗಿದೆ.ಹೊಸ ಹೊಸ ಐಐಟಿ, ಐಐಎಂಗಳ ಸ್ಥಾಪನೆಯಾಗಿದೆ. ಹಳ್ಳಿ ಹಳ್ಳಿಗೆ ಡಿಜಿಟಲ್​ ಇಂಡಿಯಾ ಲಾಭ ಪಡೆದಿವೆ. ನಮ್ಮ ದೇಶದ ರೈತರು ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ.ನಮ್ಮ ಸೇನೆ ಕರುಣೆ, ಸಹನೆ, ಶಾಂತಿಯಿಂದ ದೇಶದ ರಕ್ಷಣೆ ಮಾಡುತ್ತಿದೆ.

ನಮ್ಮ ಸೇನೆ ಸರ್ಜಿಕಲ್​ ಸ್ಟ್ರೈಕ್​ ಮಾಡಿ ಶತ್ರುಗಳನ್ನ ದಮನ ಮಾಡಿದೆ. ನಮ್ಮ ಸೇನೆ ದೇಶದ ರಕ್ಷಣೆಗೆ ಬದ್ಧವಾಗಿದೆ. ಇದಕ್ಕಾಗಿ ಹಗಲಿರಳು ಶ್ರಮಿಸುತ್ತಿದೆ.ನಮ್ಮ ಸೇನೆ, ಪೊಲೀಸರು ಹಗಲಿರಳು ದೇಶದ ಸೇವೆಯಲ್ಲಿ ನಿರತರಾಗಿದ್ದಾರೆ. ದೇಶದ ಜನರ ರಕ್ಷಣೆಗೆ ಜೀವ ತ್ಯಾಗ ಮಾಡಿದ್ದಾರೆ. ಇವರೆಲ್ಲರ ಸೇವೆಯಿಂದ ನಾವು ಸುರಕ್ಷಿತವಾಗಿ ಇದ್ದೇವೆ ಎಂದು ಮೋದಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here