ಭಾರತೀಯ ಹುಡುಗನ್ನು ಪ್ರೀತಿಸಿ ಮದುವೆಯಾದ ಇಂಗ್ಲೆಂಡ್ ನ ಡೆಪ್ಯೂಟಿ ಟ್ರೇಡ್ ಕಮಿಷನರ್..!

ಅಂತರಾಷ್ಟ್ರೀಯ

ಟನ್ ನ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭಾರತೀಯ ಹುಡುಗನ್ನು ಪ್ರೀತಿಸಿ ಮದುವೆಯಾಗುವುದು ಸುಲಭವಾಗಿ ಆಗುವಂಥದ್ದಲ್ಲ. ಆದರೆ, ಪ್ರೀತಿ ಎನ್ನುವುದು ಹಾಗೆ. ನವದೆಹಲಿಯಲ್ಲಿ ದಕ್ಷಿಣ ಏಷ್ಯಾದ ಇಂಗ್ಲೆಂಡ್ ನ ಡೆಪ್ಯುಟಿ ಟ್ರೇಡ್ ಕಮೀಷನರ್ ಆಗಿರುವ ರೈಯಾನನ್ ಹ್ಯಾರಿಸ್ ತಾವು ಪ್ರೀತಿಸಿದ ಭಾರತೀಯ ಹುಡುಗ ಹಿಮಾಂಶು ಪಾಂಡೆಯನ್ನು ವಿವಾಹವಾದರು. ವಿವಾಹದ ವೇಳೆ ಕೆಂಪು ಬಣ್ಣದ ಲೆಹೆಂಗಾ ಧರಿಸಿ, ದೇಸಿ ವಧುವಿನಂತೆ ಕಂಗೊಳಿಸಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದೊಂದಿಗೆ ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನಲ್ಲಿ ಅವರ ಪೋಸ್ಟ್ ನಲ್ಲಿ ವೈರಲ್ ಆಗುತ್ತಿರುವುದು ಮಾತ್ರವಲ್ಲದೆ,

ದೇಸಿ ವಧುವಿನ ಅಲಂಕಾರದಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದೀರಿ ಎನ್ನುವ ಕಾಮೆಂಟ್ ಗಳೂ ಬಂದಿವೆ. ರೈಯಾನನ್ ಕೆಂಪು ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿರುವುದು ಮಾತ್ರವಲ್ಲ, ಭಾರತೀಯ ವಧುವಿನಂತೆಯೇ ಅದರೊಂದಿಗೆ ಸೊಗಸಾದ ಆಭರಣಗಳನ್ನು ಧರಿಸಿದ್ದರು ಮತ್ತು ತನ್ನ ವರನೊಂದಿಗೆ ಫೋಟೋಗೆ ಪೋಸ್ ಕೂಡ ನೀಡಿದ್ದಾರೆ. ಭಾರತಕ್ಕ ಅಂದಾಜು ನಾನು ನಾಲ್ಕು ವರ್ಷಗಳ ಹಿಂದೆ ಬಂದಿದ್ದೆ. ಸಾಕಷ್ಟು ನಿರೀಕ್ಷೆಗಳು ಮತ್ತು ಕನಸುಗಳೂ ನನ್ನೊಂದಿಗೆ ಬಂದಿದ್ದವು. ಆದರೆ, ನನ್ನ ಜೀವನದ ಪ್ರೀತಿಯನ್ನು ಇಲ್ಲಿ ಕಂಡುಕೊಂಡು ಅವರನ್ನು ವಿವಾಹವಾಗುತ್ತೇನೆ ಎಂದು ಒಂದು ಕ್ಷಣವೂ ಎಣಿಕೆ ಮಾಡಿರಲಿಲ್ಲ. ಆದರೆ, ಈ ಅಪೂರ್ವ ಭಾರತದಲ್ಲಿ ಇಂಥದ್ದೊಂದು ಸಂತೋಷವನ್ನು ನಾನು ಕಂಡಿದ್ದೇನೆ.

 

ಭಾರತ ಯಾವಾಗಲೂ ನನ್ನ ಮನೆಯಾಗಿರುತ್ತದೆ ಎನ್ನುವುದಕ್ಕೆ ನನಗೆ ಬಹಳ ಸಂತಸವಿದೆ’ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ. ರೈಯಾನನ್ ಹ್ಯಾರಿಸ್, ಚಿತ್ರ ನಿರ್ದೇಶಕ ಹಾಗೂ ಗೋಲ್ಡ್ ರಾಕ್ ಫಿಲ್ಮ್ ಸಂಸ್ಥಾಪಕ ಹಿಮಾಂಶು ಪಾಂಡೆ ಅವರನ್ನು ವಿವಾಹವಾಗಿದ್ದಾರೆ. ಟ್ವಿಟರ್ ನಲ್ಲಿ ಕೇವಲ 6 ಸಾವಿರ ಫಾಲೋವರ್ ಗಳನ್ನು ಹೊಂದಿರುವ ರೈಯಾನನ್ ಹ್ಯಾರಿಸ್ ಈ ಚಿತ್ರವನನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲಿಯೇ 30 ಸಾವಿರಕ್ಕೂ ಅಧಿಕ ಲೈಕ್ ಗಳು ಬಂದಿವೆ. ನೆಟಿಜನ್ ಗಳು ಮುಂದಾದ ಚಿತ್ರವನ್ನು ಬಹಳ ಇಷ್ಟಪಟ್ಟಿರುವುದು ಮಾತ್ರವಲ್ಲ, ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.

Leave a Reply

Your email address will not be published.