ಹೇಮಾವತಿ ಜಲಾಶಯದಿಂದ 50,950 ಕ್ಯೂಸೆಕ್ ನೀರು ಬಿಡುಗಡೆ

ಜಿಲ್ಲೆ

ಹಾಸನ: ಮಲೆನಾಡು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣಾರ್ಭಟ ಹಿನ್ನೆಲೆ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೆ ಇಂದು 43,737 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಇಂದು 50,950 ಕ್ಯುಸೆಕ್ ನೀರನ್ನು ಅಧಿಕಾರಿಗಳು ಹೊರ ಬಿಡುತ್ತಿದ್ದಾರೆ.

ಹೇಮಾವತಿ ಜಲಾಶಯ ಗರಿಷ್ಠ 2922 ಅಡಿ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಇಂದು 2921 ಅಡಿ ನೀರು ಸಂಗ್ರಹವಾಗಿದೆ. 37 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ 36 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ಎರಡು ವಾರಗಳಿಂದ ಬಾರಿ ಮಳೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ.

Leave a Reply

Your email address will not be published.