ಡಿಜಿಟಲ್ ಯುಗದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಒತ್ತು; ಡಿಡಿಪಿಐ ರಘನಾಥ ರೆಡ್ಡಿ

ಬೆಂಗಳೂರು

ಶಿಡ್ಲಘಟ್ಟ: ಇಂದಿನ ಮಕ್ಕಳು ಡಿಜಿಟಲ್ ತಂತ್ರಜ್ಞಾನಕ್ಕೆ ಬೇಗ ಹೊಂದಿಕೊಳ್ಳುತ್ತಾರೆ ಅದರಿಂದ ಮಕ್ಕಳಿಗೆ ಇಷ್ಟವಾಗುವ ಮೊಬೈಲ್ ನಿಂದಲೇ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದು ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ್ ಅಭಿಪ್ರಾಯ ಪಟ್ಟರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ವಿಧ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಮಾರುಹೋಗಿದ್ದು ಇದರಿಂದ ದುಷ್ಪರಿಣಾಮಗಳು ಇದ್ದರೂ ಕೂಡ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಮೊಬೈಲ್ ಬಳಕೆ ಸಹಕಾರಿಯಾಗಿತ್ತು, ಇನ್ನು ಕ್ರೆಸೆಂಟ್ ಶಾಲೆಯಲ್ಲಿ ಅಳವಡಿಸಿರುವ ಡಿಜಿಟಲ್ ಪಠ್ಯಕ್ರಮ ಶ್ಲಾಘನೀಯ, ಯಾರೇ ವಿದ್ಯಾರ್ಥಿ ತರಗತಿಗಳಿಗೆ ಗೈರಾದಾಗ ಈ ಶಾಲೆ ಪ್ರಸ್ತುತಪಡಿಸಿರುವ ಆನ್ಲೈನ್ ತರಗತಿಗಳನ್ನು ಕೇಳುವ ಮೂಲಕ ಉತ್ತಮ ಕಲಿಕೆ ಸಾಧ್ಯವಾಗಲಿದೆ ಎಂದರು. ನಂತರ ಶಾಲೆಯ ಸಂಸ್ಥಾಪಕ ತಮೀಮ್ ಮಾತನಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಡಿಜಿಟಲ್ ಸಿಸ್ಟಮ್ ಅನ್ನು ಅಳವಡಿಸಿದ್ದು ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವ ಹಾಗೂ ಹೋಗುವ ಸಮಯ ಹಾಗೂ ಹಾಜರಾತಿಯನ್ನು ನಿಖರವಾಗಿ ತಿಳಿಯಬಹುದಾಗಿದೆ, ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಿ ಆದಾಗ ಪೋಷಕರಿಗೆ ತಿಳಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಎ ಎಸ್ ಪಿ ಕುಶಾಲ್ ಚೌಕ್ಸಿ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿಶಂಕರ್, ಪೊಲೀಸ್ ಇನ್ಸ್ಪೆಕ್ಟರ್ ಧರ್ಮೇಗೌಡ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.