ಅತೃಪ್ತ ಶಾಸಕರು ಮುಂಬೈಗೆ ಹೋದಾಗ ನನಗೆ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ರು: ನವ್ಯಶ್ರೀ ಹೊಸ ಬಾಂಬ್

ಬೆಂಗಳೂರು

ಬೆಳಗಾವಿ: ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ನಾಯಕರೊಬ್ಬರಿಗೆ ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಮಾಹಿತಿ ಕೊಡ್ತಿದ್ದೆ ಎಂದು ನವ್ಯಶ್ರೀ ಆರ್. ರಾವ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ನನಗೆ ಮುಂಬೈಗೆ ಹೋಗಲು ಸೀಕ್ರೆಟ್ ಟಾಸ್ಕ್ ನೀಡಿದ್ದರು.

ಅದು ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸೀಕ್ರೆಟ್ ಟಾಸ್ಕ್ ಆಗಿತ್ತು. ಅದಕ್ಕಾಗಿ ಬೇರೆ-ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿದ್ದೆ ಎಂದು ಹೇಳಿದ್ದಾರೆ. ನಾನು ಮುಂಬೈನ ಸುಫಿಯೋಟೆಲ್ ಹೋಟೆಲ್‌ನಲ್ಲಿ ತಂಗಿದ್ದೆ. ನನ್ನ ಜೊತೆ ಮೂವರು ಮಹಿಳೆಯರು ಬಂದಿದ್ದರು. ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿಕೊಳ್ಳುತ್ತಿದ್ದೆ. ನಂತರ ಕಾಂಗ್ರೆಸ್ ನಾಯಕರಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ ಕೊಡ್ತಿದ್ದೆ. ಆ ಸೀಕ್ರೆಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಮುಂಬೈ ರಹಸ್ಯ ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published.