ಬೆಳಗಾವಿ ಬ್ರೇಕಿಂಗ್; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಪ್ರಾರಂಭವಾಗುವ ಮುನ್ನ ಮಾಧ್ಯಮಗಳೊಂದಿಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ನಾನು ಲೋಕಸಭೆ ಚುನಾವಣೆ ಪ್ರಚಾರದ ಪ್ರಗತಿಯ ಮಾಹಿತಿಯನ್ನು ಪಡೆಯುತ್ತೇನೆ. ಈಗಾಗಲೇ ರೈತ ಮುಖಂಡ ಬಾಬಾಗೌಡ ಪಾಟೀಲ, ಕಮ್ಯೂನಿಸ್ಟ್ ಮುಖಂಡರು ಎಲ್ಲರನ್ನೂ ಭೇಟಿ ಮಾಡಿದ್ದೇನೆ. ಹಸಿರು ಟವಲ್ ಹಾಕಿಕೊಂಡವರು, ಹಸಿರು ಟವಲ್ ಹಾಕಿಕೊಳ್ಳದ ಶೇ 70 ರಷ್ಟು ರೈತರೂ ಕೂಡಾ ಇಲ್ಲಿ ಇದ್ದಾರೆ. ಈ ಮೂರು ಉಪ ಚುನಾವಣೆಯಲ್ಲಿ ರೈತರು ಇದ್ದಾರೆ. ರೈತರ ಸ್ವಾಭಿಮಾನ ಕ್ಕೆ ಧಕ್ಕೆ ಆಗಿದೆ. ಈ ಸ್ವಾಭಿಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡುತೇನೆ.
ಬಿಜೆಪಿಯವರು ಲಿಂಗಾಯತರಾದರೂ ಮಾಡಲಿ, ಹೊಸ ಮಠವನ್ನಾದರೂ ನಿರ್ಮಾಣ ಮಾಡಲಿ. ನಮಗೆ ಲಿಂಗಾಯತರು, ಮರಾಠಿಗರು ಸೇರಿದಂತೆ ಬೇರೆ ಜನಾಂಗದವರು ನಮ್ಮ ಅಣ್ಣತಮ್ಮಂದಿರು. ಬಿಜೆಪಿಯವರು ಜಾತಿ ಲೆಕ್ಕದಲ್ಲಿ ಜನರನ್ನು ಬೇರೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ ನೀತಿ ಮೇಲೆ ರಾಜಕಾರಣ ಮಾಡ್ತಿವಿ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ. ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ವ್ಯಕ್ತಪಡಿಸಲಿದೆ. ಸರ್ಕಾರ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಅವರ ನೋವನ್ನು ಸರ್ಕಾರ ಕೇಳಬೇಕು. ಅವರ ಮುಷ್ಕರವನ್ನು ಮೊಟಕು ಮಾಡಬಾರದು. ಸರ್ಕಾರ ಅವರ ಮೇಲೆ ನಡೆಸುತ್ತಿರುವ ಧೋರಣೆ ಸರಿಯಿಲ್ಲ ಎಂದು ಕಿಡಿಕಾರಿದ ಡಿಕೆ ಶಿವಕುಮಾರ್