ಕೊರೊನಾಗೆ ಪರಿಹಾರ ಹುಡುಕದೇ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ; ಡಿಕೆಶಿ ಗಂಭೀರ ಆರೋಪ

ಕೊರೊನಾಗೆ ಪರಿಹಾರ ಹುಡುಕದೇ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ; ಡಿಕೆಶಿ ಗಂಭೀರ ಆರೋಪ

524
0

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ವಿಚಾರವಾಗಿ ಮಾತನಾಡಿದ ಡಿಕೆಶಿ, ಆರೋಗ್ಯ ಸಚಿವರು ಮೂವರು ಮಾತ್ರ ಆಕ್ಸಿಜನ್ ಕೊರತೆಯಿಂದ ಸತ್ತಿರೋದು ಅಂದ್ರು.  ನಮ್ಮ ಶಾಸಕರು 34 ಜನ ಸತ್ತಿದ್ದಾರೆ ಅಂತಿದ್ದಾರೆ. ಇದನ್ನು ಯಾವ ಸರ್ಟಿಫಿಕೇಟ್ ಮೂಲಕ‌ ಖಚಿತ ಪಡಿಸೋದು? ಚಾಮರಾಜನಗರದಲ್ಲಿ 24 ಜನರನ್ನು ಸರ್ಕಾರ ಕೊಲೆ ಮಾಡಿದೆ. ಇದು ಕೊಲೆ ಅಂತ ನಾನು ಹೇಳ್ತಿನಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಸಿಎಂ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇನ್ನೂ ಸಿಎಂ‌ ಎಷ್ಟು ಅಂತ ಸುಳ್ಳು ಹೇಳ್ತಾರೆ.  ಪ್ರವಚನ ಕೇಳ್ತಲೇ ಇದೀವಿ ನಾವು. ಆಕ್ಸಿಜನ್, ಬೆಡ್ ಸಿಗುತ್ತೆ ಅಂತ ಜನರಲ್ಲಿ ಸರ್ಕಾರ ಧೈರ್ಯ ತುಂಬಲಿ. ನಮ್ಮ ಶಾಸಕರು ಸಿಎಂ ಭೇಟಿಗೆ ಅವಕಾಶ ಕೇಳಿದ್ರು. ಸಿಎಂ ಇನ್ನೂ ಅನುನತಿ ಕೊಡಲಿಲ್ಲ. ಹಾಗಾಗಿ ನಾವು ಸಿಎಸ್ ಭೇಟಿ ಮಾಡಿದ್ವಿ. ಸಿಎಂ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಸಿಎಂ ಬಿಎಸ್​ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಸಿಎಂ ಯಡಿಯೂರಪ್ಪ ಸೇರಿದಂತೆ ಯಾವ ಸಚಿವರ ಮೇಲೂ ನಂಬಿಕೆ ಇಲ್ಲ. ನೀವು ಎಲ್ಲ ತೋರಿಸ್ತಾಯಿದ್ದೀರಾ ಏನ್ ಆಗ್ತಾಯಿದೆ ಅಂತ. ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಅನೇಕ ವಿಚಾರಗಳನ್ನು ಅವರ ಜೊತೆಗೆ ಚರ್ಚೆ ಮಾಡಿದ್ದಿವಿ. ರಾಜ್ಯದ ಜನರ ಸಾವು ನಮಗೆ ನೋವು ತಂದಿದೆ. ವಾಸ್ತವಾಂಶ ತಿಳಿಯಲು ಮುಖ್ಯ ಕಾರ್ಯದರ್ಶಿ ಭೇಟಿಗೆ ನಾವು ಬಂದಿದ್ದೆವು. ಸಿಎಸ್ ಅವರು ಆಕ್ಸಿಜನ್ ಕೊರತೆ ಇದೆ ಅಂತ ಒಪ್ಕೊಂಡಿದ್ದಾರೆ. ನಮ್ ಹತ್ರ ನಿಭಾಯಿಸೋಕ್ಕೆ ಆಗ್ತಿಲ್ಲ ಅಂದ್ರು. ರಾಜ್ಯಕ್ಕೆ 1750 ಟನ್ ಆಕ್ಸಿಜನ್ ಅಗತ್ಯ ಇದೆ.

ಆದರೆ, ಕೇಂದ್ರ 850 ಟನ್ ಕೊಡ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪ್ರತಿ ಊರುಗಳಲ್ಲಿ ಲಸಿಕೆ ಹಂಚಲು ಸರ್ಕಾರ ಕ್ಯಾಂಪ್ ಮಾಡಲಿ. ಎಲ್ಲರಿಗೂ ಉಚಿತ ಲಸಿಕೆ ಕೊಡಲಿ. ರೆಮೆಡಿಸ್ವಿಯರ್ ಅನ್ನು ಸಂಸದ ಉಮೇಶ್ ಜಾಧವ್ ಕಲಬುರಗಿ ತಗೊಂಡ್ ಹೋದ್ರು ಎಂದು ಸಿಎಸ್​ ಹೇಳಿದ್ದಾರೆ. ಹಾಗಿದ್ದರೆ ನಮಗೂ ಕೊಡಿ ನಾವೂ ತಗೊಂಡ್ ಹೋಗ್ತೀವಿ ಅಂದ್ವಿ. ಆಸ್ಪತ್ರೆಗಳಲ್ಲಿ ರೆಮೆಡಿಸಿವಿರ್ ದಂಧೆ ನಡೀತಿದೆ ಎಂದು ಆರೋಪಿಸಿದರು.

VIAಕೊರೊನಾಗೆ ಪರಿಹಾರ ಹುಡುಕದೇ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ; ಡಿಕೆಶಿ ಗಂಭೀರ ಆರೋಪ
SOURCEಕೊರೊನಾಗೆ ಪರಿಹಾರ ಹುಡುಕದೇ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ; ಡಿಕೆಶಿ ಗಂಭೀರ ಆರೋಪ
Previous articleಕೊಡಗಿನಲ್ಲಿ ಹೆಚ್ಚುತ್ತಿರುವ ಕೋವಿಡ್; ಈ ಕುರಿತು ಚಾರುಲತ ಸೋಮಲ್ ಹೇಳಿದ್ದೇನು?
Next articleಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ; ಕೊಡಗಿನಿಂದ ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here