ಡಿಕೆಶಿ ಭೇಟಿ ಮಾಡಿದ ಡಾ ಜಿ ಪರಮೇಶ್ವರ್: ಕುತೂಹಲ ಕೆರಳಿಸಿದ ಹಾಲಿ ಮತ್ತು ಮಾಜಿ ಅಧ್ಯಕ್ಷರ ಭೇಟಿ

ಬೆಂಗಳೂರು

ಬೆಂಗಳೂರು : ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಮುಂಬರುವ ದಿನದಲ್ಲಿ ಪಕ್ಷ ಸಂಘಟನೆ ಹೇಗಿರಬೇಕು

ಯಾವ ರೀತಿ ಕಾರ್ಯ ಯೋಜನೆಯನ್ನು ರೂಪಿಸಬೇಕು. ಎನ್ನುವ ಹಲವು ಮಹತ್ವದ ಚರ್ಚೆಗಳನ್ನು ಕೆಲವು ಗಂಟೆಗಳ ಕಾಲ ನಡೆಸಿದ್ದು ಹಾಲಿ ಮತ್ತು ಮಾಜಿ ಕೆಪಿಸಿಸಿ ಅಧ್ಯಕ್ಷರು ಭೇಟಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಚುಕ್ಕಾಣಿ ಹಿಡಿಯಲು ಹಲವು ರಣತಂತ್ರ ರೂಪಿಸುವ ಚರ್ಚೆಯನ್ನು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

Leave a Reply

Your email address will not be published.