Home Cinema D/O ನಾಗರತ್ನ ರೂಪಿಸಿದ್ಳು ಅಪ್ಪನ ವಿರುದ್ಧವೇ ಸಂಚು..! ತಾನೇ ತೋಡಿದ ಹಳ್ಳಕ್ಕೆ ಬಿದ್ದ ಮೇಲೆ ಹೇಳಿದ್ದೇನು...

D/O ನಾಗರತ್ನ ರೂಪಿಸಿದ್ಳು ಅಪ್ಪನ ವಿರುದ್ಧವೇ ಸಂಚು..! ತಾನೇ ತೋಡಿದ ಹಳ್ಳಕ್ಕೆ ಬಿದ್ದ ಮೇಲೆ ಹೇಳಿದ್ದೇನು ನಾಗರತ್ನ..!

804
0
SHARE

ದುನಿಯಾ ವಿಜಯ್. ಕನ್ನಡ ಚಿತ್ರರಂಗದ ಕರಿಚಿರತೆ. ಕಳೆದೊಂದು ತಿಂಗಳ ಹಿಂದೆ ಪಾನಿಪುರಿ ಕಿಟ್ಟಿ ತಮ್ಮ ಮಾರುತಿಗೆ ಸಾಯುವ ಹಾಗೇ ಬಡಿದು ವಿಜಿ ಜೈಲು ಪಾಲಾಗಿದ್ದು, ಇತ್ತ ವಿಜಿಯ ಇಬ್ಬರೂ ಹೆಂಡ್ತಿಯರು ಬೀದಿ ರಂಪ ಮಾಡಿದ್ದೀಗ ಇತಿಹಾಸ..ಅವತ್ತು ಶುರುವಾಗಿದ್ದ ವಿಜಿ ಹೆಂಡ್ತಿಯರ ಜಡೆ ಜಗಳ, ಇದೀಗ ಇನ್ನೊಂದು ಹಂತ ತಲುಪಿದೆ. ಅದು, ಭಯಾನಕ ಸತ್ಯವೊಂದು ಬಯಲಾಗುವ ಮೂಲಕ.

ಯಸ್, ಇದು.. ಬೆಳ್ಳಂ ಬೆಳ್ಳಗ್ಗೆ ವಿಜಿ ಸಿಡಿಸಿದ ಬಾಂಬು. ಅಸಲಿಗೆ ವಿಜಿ ಜೈಲುಪಾಲಾದಾಗ ಕೀರ್ತಿ ನನಗೆ ಹೊಡೆದಿದ್ದಾರೆಂದು ಆರೋಪಿಸಿದ್ದ ನಾಗರತ್ನನೇ, ಖುದ್ದು.. ಕೀರ್ತಿಗೆ ಬಡಿದಿದ್ದಾರೆ. ಅದು, ಚಪ್ಪಲಿಯಲ್ಲಿ. ಹೌದು, ಕೀರ್ತಿಗೆ ಮನಸೋಇಚ್ಚೆ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ನಾಗರತ್ನ, ಕೊನೆಗೆ ಕೀರ್ತಿ ಮೇಲೆನೇ ಹಲ್ಲೆ ಆರೋಪ ಮಾಡಿದ್ದರು. ಆದ್ರೆ ಇದೆಲ್ಲಾ ಮಾಡುವ ಮುನ್ನ, ತನ್ನ ದಾದಾಗಿರಿಯ ದಿನಗಳು ಸಿಸಿಟಿವಿಯಲ್ಲಿ ಸೆರೆಯಾಗ್ತಿದೆ ಅನ್ನೋದನ್ನೇ ನಾಗರತ್ನ ಮರೆತು ಬಿಟ್ಟಿದ್ದರು ಅನ್ಸುತ್ತೆ. ಇದೀಗ ಅದೇ ಸಿಸಿಟಿವಿ ನಾಗರತ್ನ ಪಾಲಿಗೆ ಮುಳ್ಳಾಗಿದೆ.

ಅಸಲಿಗೆ ಇಲ್ಲಿ ಇನ್ನೊಂದು ಬೆಚ್ಚಿ ಬೀಳುವ ಸಂಗತಿ ಇದೆ. ಅದುವೇ ನಾಗರತ್ನ ಪುತ್ರಿ ಮೋನಿಕಾ ಮಾಡಿದ ಭಯಂಕರ ಫ್ಲ್ಯಾನ್. ಹೌದು, ಇದೆಲ್ಲಾ ರಾದ್ಧಾಂತದ ಹಿಂದೆ ವಿಜಿಯ ಮುದ್ದಿನ ಮಗಳು ಮೋನಿಕಾ ತಲೆ ಇದೆ. ನಿಮಗೆ ಗೊತ್ತಿರಲಿ ಕಳೆದೊಂದು ವಾರದ ಹಿಂದೆ ಮೋನಿಕಾ ಅಪ್ಪನ ವಿರುದ್ಧವೇ ತಿರುಗಿ ಬಿದ್ದಿದ್ದಳು. ಲಗೇಜ್ ತರಲು ಹೋದಾಗ ತಂದೆ ತನ್ನ ಎರಡನೇ ಹೆಂಡ್ತಿಯೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದರು ಅನ್ನುವ ಆರೋಪ ಮಾಡಿದ್ದರು. ಕೈಗೆ ಪೆಟ್ಟಾಗಿದೆ ಅಂಥನೂ ಅಂದಿದ್ದರು.

ಮೋನಿಕಾ ಆರೋಪ ಮಾಡಿದ ಬೆನ್ನಲ್ಲೇ, ವಿಜಿ ಮಾತನಾಡಿದ್ದರು. ನಾನ್ಯಾಕೆ ನನ್ನ ಮಗಳ ಮೇಲೆ ಆರೋಪ ಮಾಡಲಿ ಅಂದಿದ್ದರು. ಅಷ್ಟೇ ಅಲ್ಲ ಸಿಸಿಟಿವಿ ವಿಡಿಯೋವನ್ನೂ ಮಾಧ್ಯಮದ ಮುಂದಿಟ್ಟಿದ್ದರು ವಿಜಿ. ಇದೀಗ ದುನಿಯಾ ವಿಜಿ ಅಂದು ಆಡಿದ್ದ ಮಾತುಗಳೇ ನಿಜ ಅನ್ನುವ ಅರ್ಥದಲ್ಲಿ ಕೆಲ ವಿಷಯಗಳು ಹೊರಬಿದ್ದಿವೆ. ಹೌದು, ಅಸಲಿಗೆ ಇದೆಲ್ಲಾ ವಿಜಿ ಪುತ್ರಿ ಮೋನಿಕಾ ಮಾಡಿದ ಪೂರ್ವನಿಯೋಜಿತ ಕೆಲ್ಸಗಳು. ನಿಮಗೆ ಗೊತ್ತಿರಲಿ.. ಇಂದು ಬೆಳ್ಳಂ ಬೆಳ್ಳಗ್ಗೆ ಹೊಸಕೇರೆಹಳ್ಳಿಯ ವಿಜಿ ನಿವಾಸದಿಂದ ತೇಲಿ ಬಂದ ಹೆಂಡ್ತಿಯರ ಕಿತ್ತಾಟದ ವಿಡಿಯೋ ಹಿಂದೆ ಇದ್ದಿದ್ದು ಇದೇ ಮೋನಿಕಾ.

ಹೌದು, ದುನಿಯಾ ವಿಜಿ ಅದ್ಯಾವಾಗ ಜೈಲುಪಾಲಾಗಿದ್ದರೋ.. ಆಗ, ಮೋನಿಕಾ ತನ್ನ ಅಮ್ಮ ನಾಗರತ್ನ ಜೊತೆ ಫೋನ್‌ನಲ್ಲಿ ಮಾತನಾಡಿದ್ದಳು. ಮನೆಗೆ ಬರುವಂತೆ ಹೇಳಿದ್ದಳು. ಪುತ್ರಿಯ ಅಣತಿಯಂತೆ ನಾಗರತ್ನ ವಿಜಿಯ ಮನೆಗೆ ಬಂದಾಗಲೇ ಈ ಘಟನೆ ನಡೆದಿದ್ದು, ಕೀರ್ತಿಯನ್ನ ಹೊಡೆದಿದ್ದು. ಇನ್ನು, ಕೀರ್ತಿಯನ್ನ ಹೊಡೆದ ನಾಗರತ್ನ, ಇದೇ ವೇಳೆ ಕೊಲೆ ಬೆದರಿಕೆನೂ ಹಾಕಿದ್ದಾರೆ ಅನ್ನೋದು ಕೀರ್ತಿಯ ಇನ್ನೊಂದು ಆರೋಪ. ಅಷ್ಟೇ ಅಲ್ಲ ಅಂದು ವಿಜಿ ತಂದೆ ಶಿವರುದ್ರಪ್ಪ ಮೇಲೂ ಹಲ್ಲೆ ಮಾಡಿದ್ದ ನಾಗರತ್ನ, ಬಲವಂತವಾಗಿ ವಿಜಿಯ ಕಾರನ್ನೂ ತೆಗೆದುಕೊಂಡು ಹೋಗಿದ್ದಾರೆ ಅನ್ನುವ ಆರೋಪವನ್ನ ಮಾಡಿದ್ದಾರೆ ಕೀರ್ತಿ. ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ ಇದೆ. ನಾಗರತ್ನ ಕೀರ್ತಿಗೆ ಚಪ್ಪಲಿ ಸೇವೆ ಮಾಡ್ತಿದ್ದಾಗ, ಮೋನಿಕಾ ಅಮ್ಮ ನಾಗರತ್ನರನ್ನ ತಡೆಯುವ ಯಾವ ಪ್ರಯತ್ನವನ್ನೂ ಇಲ್ಲಿ ಮಾಡುವದಿಲ್ಲ.

ಇದೆಲ್ಲದ್ರ ನಡುವೆ, ಮೋನಿಕಾ ಇನ್ನೊಂದು ಕೆಲ್ಸವನ್ನೂ ಮಾಡಿದ್ದಾಳೆ. ಅದುವೇ ಸಿಸಿಟಿವಿಯ ಫುಟೇಜ್ ಅಬೇಸ್ ಮಾಡಿದ್ದು. ಹೌದು, ನಾಗರತ್ನ ಕೀರ್ತಿ ಮೇಲೆ ಹಲ್ಲೆ ನಡೆಸಿದ ಬಳಿಕ ಮೋನಿಕಾ, ಹಲ್ಲೆ ದೃಶ್ಯವನ್ನ ಪೆನ್‌ಡ್ರೈವ್‌ಗೆ ಕಾಪಿ ಮಾಡಿ, ಓರಿಜಿನಲ್ ಫುಟೇಜ್‌ನ್ನ ಡಿಲೀಟ್ ಮಾಡಿದ್ದಾಳೆ. ನಂತರ ಅನುಮಾನ ಬಾರ‍್ದೇ ಇರಲಿ ಎಂದು ಸಿಸಿಟಿವಿಯ ಡಿಎಸ್‌ಆರ್ ವೈರ್ ಕಟ್ ಮಾಡಿದ್ದಾಳೆ. ಕೊನೆಗೆ ಎಲ್ಲವನ್ನೂ ವಿಜಿ ಪುತ್ರ ಸಾಮ್ರಾಟ್ ಮೇಲೆ ಎತ್ತಿ ಹಾಕಿದ್ದಾಳೆ ಮೋನಿಕಾ. ಆದ್ರೆ ಇಷ್ಟೆಲ್ಲಾ ಮಾಡಿದ್ದ ಮೋನಿಕಾ, ಪೆನ್ ಡ್ರೈವ್‌ನ್ನ ತನ್ನ ಜೊತೆ ತೆಗೆದುಕೊಂಡು ಹೋಗಲಿಲ್ಲ. ಇದುವೇ ಮೋನಿಕಾ ಮಾಡಿಕೊಂಡ ಯಡವಟ್ಟು. ಹೌದು, ಪೆನ್ ಡ್ರೈವ್‌ನ್ನ ಮೋನಿಕಾ ತನ್ನ ರೂಂನ ಕಬೋರ್ಡ್‌ನಲ್ಲಿ ಮರೆತು ಹೋಗಿದ್ದಳು.

ಹಾಗಾಗೇ, ವಿಜಿ ಕೈಗೆ ಸಿಕ್ಕರೆ ಸತ್ಯ ಬಯಲಾಗುತ್ತೆ ಅನ್ನುವ ಆತಂಕದಲ್ಲೇ, ಮೋನಿಕಾ ಬಟ್ಟೆ ತೆಗೆದುಕೊಂಡು ಹೋಗುವ ನೆಪದಲ್ಲಿ ಮನೆಯೊಳಗೆ ಹೋಗುವ ಯತ್ನ ಮಾಡಿದ್ದಳು. ಬಟ್, ದುನಿಯಾ ವಿಜಿ ಹಾಗೂ ಕೀರ್ತಿ ಮನೆಯ ಬಾಗಿಲು ತೆಗೆಯಲಿಲ್ಲ. ಹಾಗಾಗೇ, ಗಿರಿನಗರ ಪೊಲೀಸ್ ಠಾಣೆಯಲ್ಲಿ ಅಪ್ಪನ ವಿರುದ್ಧವೇ ಕಂಪ್ಲೇಟ್ ಕೊಟ್ಟಿದ್ದಳು ಮೋನಿಕಾ.ಅದ್ಯಾವಾಗ, ಮೋನಿಕಾ ಬಟ್ಟೆ ತೆಗೆದುಕೊಂಡು ಹೋಗಬೇಕು ಅಂದಳೋ, ಆಗ ಅನುಮಾನಗೊಂಡ ವಿಜಿ ಮೋನಿಕಾ ರೂಂನ್ನ ತಡಕಾಡಿದ್ದಾರೆ. ಈ ಹುಡುಕಾಟದಲ್ಲಿದ್ದಾಗ್ಲೇ ವಿಜಿಗೆ ಪೆನ್ ಡ್ರೈವ್ ಸಿಕ್ಕಿದೆ. ಪೆನ್ ಡ್ರೈವ್‌ನ್ನ ಲ್ಯಾಪ್ ಟಾಪ್‌ಗೆ ಹಾಕಿ ನೋಡಿದಾಗ ಸತ್ಯ ಬಯಲಾಗಿದೆ.


ಅದೇನೆ ಇರ‍್ಲಿ, ಸದ್ಯ ದುನಿಯಾ ವಿಜಿ ಕೊಟ್ಟಿರುವ ದೂರಿನ ಅನ್ವಯ, ನಾಗರತ್ನ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮೋನಿಕಾನೂ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾಳೆ. ಮುಂದಿನ ದಿನಗಳಲ್ಲಿ ವಿಜಿ ಹಾಗೂ ಇಬ್ಬರು ಹೆಂಡ್ತಿಯರ ಕಿತ್ತಾಟ, ಇನ್ನೆಲ್ಲಿ ಹೋಗಿ ಮುಟ್ಟುತ್ತೋ.. ಬೀದಿ ರಂಪ ಕೊನೆಯಾವಾಗ ಆಗುತ್ತೋ.. ಕಾದು ನೋಡಬೇಕು.ನಾಗರತ್ನ ಸದ್ಯ ಹಲ್ಲಲ್ಲು ಮಸಿಯುತ್ತಿರುವ ವಿಜಿ, ಪುತ್ರಿ ಮೇಲಿನ ಪ್ರೀತಿ ಹಾಗೂ ಮಮಕಾರದಿಂದ, ಹೇಗೋ.. ಪೊಲೀಸರಿಂದ, ಕಾನೂನುನಿಂದ ಪಾರು ಮಾಡಿದ್ದಾರೆ. ಹಾಗಂತ, ವಿಜಿ ರಾಜಿ ಸಂಧಾನ ಮಾಡಿಕೊಂಡಿಲ್ಲ. ಮೊದಲ ಪತ್ನಿ ನಾಗರತ್ನ ಮಾಡಿದ ತಪ್ಪಿಗೆ.. ಮಕ್ಕಳ ಜೀವನ ಜೊತೆ ಆಟವಾಡಿದ್ದಕ್ಕೆ.. ಶಿಕ್ಷೆಯಾಗಲೇಬೇಕೆನ್ನುವ ದುನಿಯಾ ವಿಜಿ, ಇದೇ ವೇಳೆ ಇನ್ನೊಂದು ಶಪಥಗೈದಿದ್ದಾರೆ.


ಹೌದು, ನಾಗರತ್ನರನ್ನ ಬಂಧಿಸಬೇಕೆಂದು ಆಗ್ರಹ ಮಾಡ್ತಿರುವ ವಿಜಿ, ಪುತ್ರಿ ಮೋನಿಕಾಳೊಂದಿಗೆ ಇನ್ಮುಂದೆ ಮಾತನಾಡ್ದೇ ಇರಲು ನಿರ್ಧರಿಸಿದ್ದಾರೆ. ತಂದೆಯಾಗಿ ಇಂಥಹದ್ದೊಂದು ನಿರ್ಧಾರಕ್ಕೆ ಬರೋದು ಕಷ್ಟವೇ. ಹೀಗಿದ್ದೂ ದುನಿಯಾ ವಿಜಿ ಇಂಥಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಕಾರಣ, ಮಗಳು ತನ್ನ ಮೇಲೆ ಸುಳ್ಳು ಕಂಪ್ಲೇಟ್ ದಾಖಲಿಸಿದ್ದಳು ಅನ್ನೋದು. ಅಮ್ಮ, ಮಗಳು.. ಇಂಥಹದ್ದೊಂದು ಭಾರೀ ಭಯಾನಕ, ಪ್ಲ್ಯಾನ್ ಮಾಡಿದ್ದರು ಅನ್ನುವ ಸುಳಿವೇ ಇರಲಿಲ್ಲ ಅನ್ನುವ ವಿಜಿ, ಮಗಳ ಭವಿಷ್ಯಕ್ಕೆ ಏನ್ ಬೇಕೋ ಅದು ಮಾಡಲು ಸಿದ್ಧರಿದ್ದಾರೆ. ಆದ್ರೆ ಇಲ್ಲಿ ಮಾತು ಇರಲ್ಲ, ಕಥೆ ಇರಲ್ಲ. ಇನ್ನೂ ಮನೆಯೊಳಗಂತೂ ಪ್ರವೇಶನೂ ಇರಲ್ಲ. ಹೀಗೆ ಕಠಿಣ ನಿರ್ಧಾರಕ್ಕೆ ಬಂದತಿರುವ ವಿಜಿ, ಎಲ್ಲೋ ಒಂದು ಕಡೆ ತನ್ನ ೨ ಬ್ರ್ಯಾಂಚ್ ಆಫೀಸ್‌ನ್ನ ನಿಭಾಯ್ಸೋದ್ರಲ್ಲಿ ಕಂಪ್ಲೀಟಾಗಿ ಎಡವಿದ್ದಾರೆ ಅನ್ನೋದು ಎಂಥವರಿಗಾದ್ರೂ ಅರ್ಥವಾಗಿಯೇ ಆಗುತ್ತೆ.

LEAVE A REPLY

Please enter your comment!
Please enter your name here