ನಗ್ನವಾಗಿ ಫೋಟೋಶೂಟ್ ಮಾಡಿಸಿದ ರಣವೀರ್ ಸಿಂಗ್: ನೆಟ್ಟಿಗರು ಶಾಕ್..!

ಚಲನಚಿತ್ರ

ಬಿಟೌನ್‌ನಲ್ಲಿ ವಿಚಿತ್ರ ಬಟ್ಟೆ ಧರಿಸುವ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿರುವ ನಟ ರಣ್‌ವೀರ್ ಸಿಂಗ್, ಸದಾ ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಬಟ್ಟೆ ಧರಿಸದೇ ಇರೋದಕ್ಕೆ ರಣ್‌ವೀರ್ ಸಿಂಗ್ ಟ್ರೋಲ್ ಆಗಿದ್ದಾರೆ. ರಣ್‌ವೀರ್ ಸಿಂಗ್ ನಗ್ನ ಅವತಾರಕ್ಕೆ ದೀಪಿಕಾ ಪಡುಕೋಣೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಹಿಂದಿ ಚಿತ್ರರಂಗದ ಸ್ಟಾರ್ ನಟ ರಣ್‌ವೀರ್ ಸಿಂಗ್ ಈ ಬಾರಿ ವಿಚಿತ್ರ ಬಟ್ಟೆ ತೊಡದೇ ಸಂಪೂರ್ಣ ನಗ್ನ ಅವತಾರದಲ್ಲಿ ಬಂದಿರೋದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಖಾಸಗಿ ಮ್ಯಾಗಜಿನ್‌ನ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ಮಾಡಿದ್ದಾರೆ. ನಟನ ಬೆತ್ತಲೆ ಅವತಾರಕ್ಕೆ ದೀಪಿಕಾರನ್ನು ಪ್ರಶ್ನಿಸಿದ್ದಾರೆ. ದೀಪಿಕಾ ಪಡುಕೋಣೆ ಅವರೇ ಸ್ವಲ್ಪ ಈ ಕಡೆ ನೋಡಿ ಎಂದು ದೀಪಿಕಾಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪತಿಗೆ ತಿಳಿ ಹೇಳಿ ಎಂದು ನಟಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಖಾಸಗಿ ಮ್ಯಾಗಜಿನ್‌ವೊಂದಕ್ಕೆ ಬೆತ್ತಲೆ ಫೋಟೋಶೂಟ್ ಅಷ್ಟೇ ನೀಡಿರುವುದಲ್ಲ. ಸಂದರ್ಶನ ಕೂಡ ನೀಡಿದ್ದಾರೆ. ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಸುಲಭ ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಅಂತಾ ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ರಣ್‌ವೀರ್ ಸಿಂಗ್ ಎನೇ ಮಾಡಿದ್ದರು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರ ತಪ್ಪಲ್ಲ. ರಣ್‌ವೀರ್ ಸಿಂಗ್ ನಗ್ನ ಫೋಟೋಶೂಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಹರಿದು ಬರುತ್ತಿದೆ.

 

Leave a Reply

Your email address will not be published.