
ಮೇಕೆದಾಟುವಿನ ಡಿಪಿಆರ್ ಮಾಡಿದ್ದು ಎಚ್ ಡಿ ಕುಮಾರಸ್ವಾಮಿ :ರವಿಕುಮಾರ್
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಬಿಜೆಪಿ ಮುಖಂಡ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರು ಸದನದ ಕಲಾಪ ಹಾಳು ಮಾಡಿ ಜನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ತಮ್ಮ ಪಾದಯಾತ್ರೆ ಬಗ್ಗೆಯೂ ಸದನದಲ್ಲಿ ಚರ್ಚಿಸಲಿಲ್ಲ. ಇನ್ನೂ ಮೇಕೆದಾಟು, ಎತ್ತಿನಹೊಳೆ, ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಶೂನ್ಯ. ಮೇಕೆದಾಟುವಿನ ಡಿಪಿಆರ್ ಮಾಡಿದ್ದು ಎಚ್ ಡಿ ಕುಮಾರಸ್ವಾಮಿ.
ಇದೀಗ ಕಾಂಗ್ರೆಸ್ ಅವರು ಅದು ನಾವು ಮಾಡಿದ್ದು ಅಂತಿದ್ದಾರೆ ಇದೆಲ್ಲಾ ಕಾಂಗ್ರೆಸ್ ಅವರ ಹಸಿ ಸುಳ್ಳು ಅಂತ ಹೇಳಿದರು. ಇನ್ನೂ ಸ್ಥಳೀಯ ಸಂಸ್ಥೆಗಳ ಒಬಿಸಿ ಮೀಸಲಾತಿ ವಿಚಾರದಲ್ಲಿ ಸಿಎಂ ಮತ್ತು ಕಾನೂನು ಸಚಿವರ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೇ ಶಿವಮೊಗ್ಗದಲ್ಲಿನ ಸದ್ಯದ ಪರಿಸ್ಥಿತಿ, ಹರ್ಷ ಕುಟುಂಬದ ಪರಿಸ್ಥಿತಿ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ರವಿಕುಮಾರ್ ಹೇಳಿದ್ದಾರೆ.