
ಬಿಸಿ ನೀರನ್ನು ಮತ್ತೆ ಮತ್ತೆ ಕುಡಿಯುತ್ತೀರಾ…? ಹಾಗಾದ್ರೆ ಜಾಗರೂಕರಾಗಿರಿ
ದಿನಕ್ಕೆ ಹಲವಾರು ಬಾರಿ ಬಿಸಿ ನೀರು ಕುಡಿದರೆ ಈ ಅಭ್ಯಾಸವೂ ಹಾನಿಯನ್ನುಂಟು ಮಾಡುತ್ತದೆನೀರು ಉತ್ತಮ ಆರೋಗ್ಯಕ್ಕೆ ಬಹಳಮುಖ್ಯ. ನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಅನಕೂಲವಾಗುತ್ತದೆ. ನೀರು ಮಿನರಲ್ಸ್ ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಜನರು ಬಿಸಿ ಬಿಸಿ ನೀರು ಸೇವಿಸುತ್ತಾರೆ. ಆದರೆ ಹೆಚ್ಚು ಬಿಸಿ ನೀರು ಕುಡಿಯುವುದು ಕೂಡಾ ಸಮಸ್ಯೆಯನ್ನುಂಟು ಮಾಡಬಹುದು ಅನ್ನೋದು ನಿಮಗೆ ಗೊತ್ತಾ?
ಹೆಚ್ಚಿನ ಜನರು ಬಿಸಿ ಬಿಸಿ ನೀರನ್ನು ಕುಡಿಯುತ್ತಾರೆ. ಬಿಸಿ ನೀರನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗಬಹುದು. ಚರ್ಮ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಆದರೆ ಅತಿಯಾದ ಬಿಸಿ ನೀರು ಕುಡಿಯುವು ದರಿಂದಲೂ ಅನಾನುಕೂಲತೆಗಳೂ ಇವೆ. ಅತಿಯಾದ ಬಿಸಿ ನೀರು ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಮೂತ್ರಪಿಂಡದ ಹಾನಿ :
ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಎದುರಾಗಬಹುದು. ಆದ್ದರಿಂದ, ಯಾವತ್ತಿಗೂ ಅತಿಯಾದ ಬಿಸಿನೀರನ್ನು ಸೇವಿಸಬೇಡಿ. ಉಗುರುಬೆಚ್ಚಗಿರುವ ನೀರನ್ನೇ ಕುಡಿಯುವುದು ಒತ್ತಮ.
ಬಾಯಿಯ ಒಳ ಭಾಗದಲ್ಲಿ ಸುಡುತ್ತದೆ:
ಅನೇಕ ಜನರು ಚಳಿಗಾಲದಲ್ಲಿ ತುಂಬಾ ಬಿಸಿನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ತುಟಿ ಮತ್ತು ಬಾಯಿಯ ಒಳಭಾಗದಲ್ಲಿ ಸುಡಬಹುದು. ಇದು ಆಹಾರ ಸೇವನೆ ವೇಳೆ ಕಿರಿಕಿರಿ ಉಂಟುಮಾಡಬಹುದು.
ಬಾಯಿಯಲ್ಲಿ ಗುಳ್ಳೆಗಳು ಬೀಳುತ್ತವೆ :
ಚಳಿಗಾಲದಲ್ಲಿ ಹೆಚ್ಚು ಬಿಸಿನೀರು ಕುಡಿಯುವುದರಿಂದ ಬಾಯಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ರೀತಿ ಕಾಣಿಸಿಕೊಳ್ಳುವ ನೋವಿನಿಂದ ಆಹಾರ ತಿನ್ನುವುದು ಮತ್ತು ಕುಡಿಯುವುದು ಕಷ್ಟವಾಗುತ್ತದೆ. ಇದಲ್ಲದೆ, ಹೆಚ್ಚು ಬಿಸಿ ನೀರನ್ನು ಸೇವಿಸುವುದರಿಂದ ನಾಲಿಗೆ ಉರಿಯುವ ಸಂಭವವೂ ಇರುತ್ತದೆ.