
ವರ್ಕ್ ಫ್ರಂ ಹೋಂನಿಂದ ಬೆನ್ನು ನೋವು ಜಾಸ್ತಿಯಾಗಿದೆಯಾ..? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ಕಳೆದ ವರ್ಷದಿಂದ ಮನೆಯಿಂದಲೇ ಕೆಲಸ ನಿರ್ವಹಿಸುವ ಕೆಲ ಜನರು ಇಂದಿಗೂ ಕೂಡ ತಮ್ಮ ತಮ್ಮ ಮನೆಯಿಂದಲೇ ಕೆಲಸ ಮಾಡು ತ್ತಿದ್ದಾರೆ ಹಾಗೂ ಇದು ನಮ್ಮ ಜೀವನವನ್ನು ಸಂಪೂರ್ಣ ಬದಲಾಯಿಸಿದೆ. ಮನೆಯಿಂದಲೇ ಕೆಲಸ ಮಾಡುವ ಹಲವರು ಹೆಚ್ಚಾಗಿರುವ ತೂಕವನ್ನು ಕಡಿಮೆ ಮಾಡಲು ಇನ್ನೂ ಸಂಘರ್ಷ ನಡೆಸುತ್ತಿದ್ದಾರೆ. ಕಡಿಮೆ ಶಾರೀರಿಕ ಚಟುವಟಿಕೆ ಹಾಗೂ ಕೆಲಸದ ಜೀವನಗಳ ನಡುವೆ ಸಂತುಲನ ಇರದೇ ಇರುವ ಕಾರಣ ಹಲವರು ಬೆನ್ನುನೋವಿನೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ. ಒಂದು ವೇಳೆ ನೀವು ಮನೆಯಲ್ಲಿಯೇ ಕೆಲಸ ಮಾಡುವ ಉಚಿತ ಡೆಸ್ಕ್ ಸಿದ್ಧಪಡಿಸದೇ ಹೋದಲ್ಲಿ ನೀವೂ ಕೂಡ ನಿತ್ಯ ಬೆಳಗ್ಗೆ ಬೆನ್ನುನೋವಿನಿಂದ ಏಳುವ ಸಾಧ್ಯತೆ ಇದೆ. ಒಂದು ವೇಳೆ ನಿಮಗೆ ಈ ನೋವು ಹಳೆಯದಾದರೇ, ಇದಕ್ಕೆ ನೀವು ಉಪಾಯ ಹುಡುಕಲೇಬೇಕು.
- ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಹಾಗೂ ಬೆನ್ನುನೋವಿನ ಒಂದು ಸಾಮಾನ್ಯ ಕಾರಣ ಕೂಡ ಹೌದು. ಹೀಗಾಗಿ ನಿಮ್ಮ ಶರೀರದಲ್ಲಿನ ವಿಟಮಿನ್ ಡಿ ಪರೀಕ್ಷಿಸಿ. ರಕ್ತತಪಾಸಣೆ ಮೂಲಕ ನೀವು ಇದನ್ನು ಮಾಡಬಹುದು.
- ನಿಮ್ಮ ದಿನನಿತ್ಯದ ಡಯಟ್ ನಲ್ಲಿ ಎರಡು ಚಮಚೆ ಕರಿ ಎಳ್ಳು ಶಾಮೀಲುಗೊಳಿಸಿ. ಏಕೆಂದರೆ ಬಿಳಿ ಎಳ್ಳು ಕ್ಯಾಲ್ಸಿಯಂ ಅವಶೇಷಗಳನ್ನು ಕಡಿಮೆ ಮಾಡುತ್ತವೆ ಹಾಗೂ ಕರಿ ಎಳ್ಳಿನ ಬೀಜಗಳು ಇದನ್ನು ಸುಧಾರಿಸುತ್ತದೆ. ಇದರಿಂದ ಮೂಳೆಗಳು ಆರೋಗ್ಯಪೂರ್ಣವಾಗಿರುತ್ತವೆ.
- ಬೆನ್ನುನೋವು ನಮ್ಮ ನಿತ್ಯ ಕಾರ್ಯಚಟುವಟಿಕೆಗಳನ್ನು ಪ್ರಭಾವಿತಗೊಳಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲೇ ಬೇಕು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ನಿಶ್ಚಿತವಾಗಿ ಅದರ ಕಡೆಗೆ ಗಮನಹರಿಸಲೇಬೇಕು.
- ನೀವೂ ಖಾಲಿ ಹೊಟ್ಟೆ ಇರುವಾಗ ಇದು ನಿಮ್ಮ ಕ್ಯಾಲೋರಿ ಹಾಗೂ ಶಕ್ತಿಯನ್ನು ಸುಡುತ್ತದೆ ಮತ್ತು ಇದು ಕೆಲಸದ ಸಂದರ್ಭದಲ್ಲಿ ಒಂದು ಅತ್ಯಾವಶ್ಯಕ ಸಂಗತಿಯಾಗಿದೆ. ಹಸಿವು ಸ್ನಾಯುಗಳಿಗೆ ಹಾನಿ ತಲುಪಿಸುತ್ತದೆ ಮತ್ತು ನಂತರ ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಬೆನ್ನುಮೂಳೆಯ ಮೇಲಿನ ಒತ್ತಡ ಬೆನ್ನು ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಎಂದು ತಜ್ಞರು ಹೇಳುತ್ತಾರೆ.