ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ರೋಗಿಗಳ ಪರದಾಟ

ಜಿಲ್ಲೆ

ತುಮಕೂರು :ತುಮಕೂರು ಜಿಲ್ಲೆಯ, ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ಜನ ಪರದಾಟ ಪಟ್ಟ ಘಟನೆ ನಡೆದಿದೆ. ವೈದ್ಯರು ಇಲ್ಲದ ಕಾರಣ ಅಪಘಾತವಾಗಿ ಬಂದಿದ್ದ ವ್ಯಕ್ತಿ ನರಳಾಡುವ ಸ್ಥಿತಿ ಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯೂ ಇಲ್ಲದೇ ಸಂಕಷ್ಟ ಎದುರಾಗಿದೆ. ಅಪಘಾತ ಪ್ರಕರಣಗಳನ್ನು ನೋಡದೇ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ನರ್ಸ್ ನನ್ನ‌ ಡ್ಯೂಟಿ ಮುಗಿದಿದೆ, ಬೀಗ ಇಲ್ಲ ಅಂತಾ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಹೀಗಾಗಿ, ವ್ಯಕ್ತಿ ಆರೋಗ್ಯ ಕೇಂದ್ರದ ಮುಂದೆಯೇ ವ್ಯಕ್ತಿಯ ನರಳಾಡುವಂತಾಗಿದೆ. ಅಪಘಾತವಾಗಿ ತಲೆಗೆ ಹಾಗೂ ಕಾಲುಗಳಿಗೆ ಗಾಯವಾಗಿತ್ತು. ಬಳಿಕ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೊನ್ನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಅಸಮಾ ಧಾನ ಹೊರಹಾಕಿದ್ದಾರೆ.

Leave a Reply

Your email address will not be published.