ಚಕ್ಕೋತ..ಎಲ್ಲಾದರೂ ಸಿಕ್ಕಿದರೆ ಖಂಡಿತ ತಿನ್ನಲು ಮರೆಯಬೇಡಿ..

ಲೈಫ್ ಸ್ಟೈಲ್
ಮೋಸಂಬಿ ಮತ್ತು ಕಿತ್ತಳೆ ಹಣ್ಣಿನಲ್ಲಿ ಸಿಗುವ ವಿಟಮಿನ್ ಸಿ ಗಿಂತ ಹೇರಳವಾಗಿ ನಮಗೆ ಈ ಚಕ್ಕೋತ ಹಣ್ಣಿನಲ್ಲಿ ಸಿಗುತ್ತದೆ.. ಎಷ್ಟೋ ಜನ ಇದರ ರುಚಿಯನ್ನು ಕೂಡ ನೋಡಿರುವುದಿಲ್ಲ.. ಆರೋಗ್ಯಕ್ಕೆ ಅದೆಷ್ಟು ಒಳಿತನ್ನು ಉಂಟುಮಾಡುತ್ತದೆ ಈ ಚಕ್ಕೋತ ಎಂದರೆ ಮತ್ತೆ ಮತ್ತೆ ನೀವು ತಿನ್ನಲು ಇಷ್ಟಪಡುತ್ತೀರಿ..
ಚಿಕ್ಕಂದಿನಲ್ಲಿ ನಮ್ಮ ಪಕ್ಕದ ಮನೆಯ ಮುಂದೆ ದೊಡ್ಡ ಮರವೇ ಇತ್ತು.. ಮಕ್ಕಳೆಲ್ಲ ಆಟವಾಡಿ ಸುಸ್ತಾಗಿ ಕುಳಿತಿರುವಾಗ ಚಕ್ಕೋತ ಹಣ್ಣನ್ನು ಬಿಡಿಸಿ ಎಲ್ಲರಿಗೂ ಒಂದೊಂದು ತೊಳೆಯನ್ನು ಅಜ್ಜಿ ಕೊಡುತ್ತಿದ್ದರು.(.ಜಯಪಾಟಿ ಸಜ್ಜೆಹಟ್ಟಿ )
ನಮಗಾಗ ಅದರ ಉಪಯೋಗವಾಗಲಿ ಅದರಿಂದ ನಮಗೇನು ಪ್ರಯೋಜನ ಎಂಬುದಾಗಲಿ ಗೊತ್ತಿರಲಿಲ್ಲ.. ಆಟವಾಡಿದ ಬಳಲಿಕೆ ಹಣ್ಣು ತಿಂದರೆ ಕ್ಷಣದಲ್ಲಿಯೇ ಕಮ್ಮಿಯಾಗಿ ಬಿಡುತ್ತಿತ್ತು..
ಆಗಾಗ ನಾವು ಅದನ್ನು ತಿನ್ನುವುದು ಅಭ್ಯಾಸ ವಾದರೂ ಅದರಿಂದ ಏನು ಉಪಯೋಗ ಎಂಬುವುದು ಗೊತ್ತಿಲ್ಲದೆಯೇ ತಿನ್ನುತ್ತಿದ್ದೆವು.
ಈ ಹಣ್ಣನ್ನು ಬಿಡಿಸುವುದು ಸ್ವಲ್ಪ ನಿಧಾನ ಮತ್ತು ಕಹಿ ಬೀಳದಂತೆ ಬಿಡಿಸಬೇಕು.. ಒಳಗಿನ ಬಿಳಿ ಸಿಪ್ಪೆ ಮೋಸಂಬಿ ಹಣ್ಣಿನಂತೆಯೇ ಇದ್ದರೂ ಕೂಡ ಕೆಂಪು ಮತ್ತು ಹಳದಿ ಮಿಶ್ರಿತವಾಗಿರುವ ಅಂತಹ ಪಲ್ಪ್ ನಮಗೆ ಕಾಣುವ ಹಾಗೆ ಬಿಡಿಸಬಾರದು..
ಏಕೆಂದರೆ ಹಣ್ಣಿನ ಸಿಪ್ಪೆಯನ್ನು ತೆಗೆದು ತೊಳೆ ಗಳನ್ನೆಲ್ಲ ಬೇರೆ ಬೇರೆ ಮಾಡಿ ಎರಡು ದಿನ ಅಥವಾ ಮೂರು ದಿನ ಇಟ್ಟು ಆನಂತರ ಆ ಮೇಲಿನ ಸಿಪ್ಪೆಯನ್ನು ಬಿಡಿಸಿ ಹಣ್ಣನ್ನು ತಿಂದು ನೋಡಿ,,, ಆ ರುಚಿಯೇ ಬೇರೆ..
ಹಣ್ಣು ಸಿಪ್ಪೆ ಬಿಡಿಸಿದ ತಕ್ಷಣ ತಿನ್ನಲು ತುಂಬಾ ಹಣ್ಣಾಗಿರಬೇಕು ಅಥವಾ ಸಿಹಿಯಾಗಿರಬೇಕು..ಇಲ್ಲದಿದ್ದರೆ ಹುಳಿ ತಿನ್ನಲು ಕಷ್ಟ.. ಹೆಚ್ಚು ಹುಳಿ ತಿನ್ನಲು ಇಷ್ಟಪಡುವವರು ಬೇಕಾದರೆ ತಿನ್ನಬಹುದು.
ತೊಳೆ ಬಿಡಿಸಿ ಮೂರು ನಾಲ್ಕು ದಿನದ ನಂತರ ಸಿಹಿ ಅದರಲ್ಲಿಯೇ ಉತ್ಪತ್ತಿಯಾಗುತ್ತದೆ ಎಂದರೆ ನೀವು ನಂಬಲಾರಿರಿ.
ಪಿಂಕ್ ಕಲರ್ ಬಂದ ನಂತರ ಹಣ್ಣನ್ನು ತಿನ್ನುವುದು ಒಳ್ಳೆಯದು..
ಉಪ್ಪು ಪೇಪರ್ ಹಾಕಿಕೊಂಡು ತಿಂದರೆ ಸ್ವಲ್ಪವೂ ಕೆಮ್ಮು ಬರುವುದಿಲ್ಲ.
ಹೆಚ್ಚು ಜೀರ್ಣಕಾರಿ..
ಮಲಬದ್ಧತೆ ಇರುವವರು ಈ ಹಣ್ಣನ್ನು ತಿಂದರೆ ಅಂತೂ ಸಲೀಸಾಗಿ ಸಮಸ್ಯೆ ಪರಿಹಾರ.
ಅಸಿಡಿಟಿ ಇರುವವರು ಇದನ್ನು ಸೇವಿಸಬಹುದು.
ಹೊಟ್ಟೆ ನೋವು ಇದ್ದವರು ಇದನ್ನು ತಿನ್ನಬಹುದು.
.
ಆಸ್ತಮ ಮತ್ತು ದಮ್ಮು ಇರುವವರು ಇದನ್ನು ಸೇವಿಸಬಹುದು.
ನಮ್ಮ ಚರ್ಮವು ಪಳಪಳ ಎನ್ನಲು ಅಂದರೆ ಚರ್ಮದ ಕಾಂತಿ ಹೆಚ್ಚು ಮಾಡುತ್ತದೆ ಈ ಹಣ್ಣು..
ಪಿತ್ತಕೋಶದಲ್ಲಿ ಇರುವಂತಹ ಕಲ್ಲು ಕಿಡ್ನಿಯಲ್ಲಿರುವ ಕಲ್ಲು ಸರಾಗವಾಗಿ ಕರಗಿಸಿ ಬಿಡುತ್ತದೆ ಎಂದರೆ ನಂಬಲಾರಿರಿ..
ದೇಹದಲ್ಲಿ ಇದ್ದಕ್ಕಿದ್ದಂತೆ ಸುಸ್ತಾಗುತ್ತದೆ ಯಾವುದೇ ಅನಾರೋಗ್ಯವು ಇಲ್ಲದಿದ್ದರೂ ಕೂಡ.. ಆಗ ಈ ಹಣ್ಣೇನಾದರೂ ಸಿಕ್ಕರೆ ಮರೆಯದೆ ತಿಂದು ನೋಡಿ ನಿಮಗೆ ಗೊತ್ತಾಗುತ್ತದೆ..
ರಕ್ತದೊತ್ತಡಕ್ಕೆ ಇದು ಹೇಳಿಮಾಡಿಸಿದ ಹಣ್ಣು.
ಹೃದಯ ತೊಂದರೆ ಇದ್ದರೂ ಕೂಡ ಅವರೂ ಇದನ್ನು ಸೇವಿಸಬಹುದು..
ಇದರ ಜ್ಯೂಸ್ ಮಾಡಿ ಕುಡಿಯಬಹುದು..
ಈ ಹಣ್ಣು ಸ್ವಲ್ಪ ಬೆಲ್ಲ, ಅಥವಾ ಸ್ವಲ್ಪ ಸಕ್ಕರೆ ಮತ್ತು ನೀರನ್ನು ಹಾಕಿ ಜ್ಯೂಸ್ ಮಾಡಿ ತಕ್ಷಣ ಸೇವಿಸಬಹುದು..
ಅಥವಾ ಹಾಗೆಯೇ ತಿನ್ನಲು ಬಹುದು..
ನಾಲ್ಕೈದು ಹಣ್ಣುಗಳ ಮಿಶ್ರಣದಲ್ಲಿ ಇದನ್ನು ಮಿಕ್ಸ್ ಮಾಡಿ ತಿನ್ನಬಹುದು..
ಎಲ್ಲಕ್ಕಿಂತ ಹೆಚ್ಚಾಗಿ ನೇರವಾಗಿ ಈ ಹಣ್ಣನ್ನು ಮಾತ್ರ ಸೇವಿಸುವುದು ಕೂಡ ಒಳಿತು.. ಸಿಕ್ಕರೆ ಬಿಡಬೇಡಿ ತಿಂದು ನೋಡಿ ಆರೋಗ್ಯ ನಿಮ್ಮ ಕೈಯಲ್ಲಿ…✍️✍️✍️✍️ಯಶುಪ್ರಸಾದ್ .✍️✍️✍️✍️

Leave a Reply

Your email address will not be published.