
ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಂಪೌಡ್ ಗೆ ನುಗ್ಗಿದ ಬಸ್
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಹೊಸನಗರ ತಾಲೂಕು ಮಾಸ್ತಿ ಕಟ್ಟೆಯಲ್ಲಿ ಸಂಭವಿಸಿದೆ. ಇಂದು ಬೆಳಗಿನಜಾವ ತೀರ್ಥಹಳ್ಳಿ ಕಡೆಯಿಂದ ಬಂದ ದುರ್ಗಾಂಬ ಬಸ್ ರಸ್ತೆ ಪಕ್ಕದ ಮನೆಗೆ ನುಗ್ಗಿದ್ದು, ಘಟನೆಯಲ್ಲಿ ಬಸ್ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಬಸ್ನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಲಾಗಿದೆ.