ಡ್ರಗ್ಸ್ ಪಾರ್ಟಿ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಿದ್ಧಾರ್ಥ್

ಅಪರಾಧ ಬೆಂಗಳೂರು

ಬೆಂಗಳೂರು: ಹಲಸೂರಿನ ದಿ ಪಾರ್ಕ್​ ಹೋಟೆಲ್ ಡ್ರಗ್ಸ್​ ಪಾರ್ಟಿ ಕೇಸ್ ಸಂಬಂಧ ಡಿಜೆ ಸಿದ್ಧಾರ್ಥ ಕಪೂರ್ ವಿಚಾರಣೆಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗಲು ಸಿದ್ಧಾರ್ಥ ಕಾಲಾವಕಾಶ ಕೇಳಿದ್ದಾರೆ. ಆ.15ರ ನಂತರ ವಿಚಾರಣೆಗೆ ಹಾಜರಾಗುವುದಾಗಿ ಸಿದ್ಧಾರ್ಥ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಷ್ಟು ಜನರ ವಿಚಾರಣೆ ಮಾಡಿದರೂ ಡ್ರಗ್ಸ್ ಬಂದಿದ್ದು ಹೇಗೆ ಎನ್ನುವುದರ ಸುಳಿವು ಮಾತ್ರ ಸಿಗುತ್ತಿಲ್ಲ. ಈಗಾಗಲೇ ಡ್ರಗ್ಸ್​​ ಪಾರ್ಟಿ ಪ್ರಕರಣದಕ್ಕೆ ಸಂಬಂಧ ಸುಮಾರು 90 ಜನರಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಕೇವಲ 30 ಮಂದಿಯಿಂದ ಮಾತ್ರ ಉತ್ತರ ಪಡೆಯಲಾಗಿದೆ. ಉಳಿದವರು ಪೊಲೀಸ್ ನೋಟಿಸ್​ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಉತ್ತರ ಕೊಡದವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲು ಹಲಸೂರು ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published.