ಟೆಕ್ನಿಕಲ್ ಪ್ಲಾನ್ ಬಳಸಿ ಡ್ರಗ್ಸ್ ಸಪ್ಲೈ: ಆರೋಪಿ ಖತರ್ನಾಕ್ ಪ್ಲ್ಯಾನ್ ಕಂಡು ಪೊಲೀಸರೇ ಸುಸ್ತು

ಅಪರಾಧ

ಬೆಂಗಳೂರು: ಟೆಕ್ನಿಕಲ್ ಪ್ಲಾನ್ ಬಳಸಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಅನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯನ್ ಮೂಲದ ನೆಲ್ಸನ್ ಬಂಧಿತ ಆರೋಪಿಯಾಗಿದ್ದು, ಈತ ಇಂಟರ್ನೆಟ್, ವಾಟ್ಸ್ಯಾಪ್ ಕಾಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸುತ್ತಿದ್ದ. ಆನ್ಲೈನ್ ಮೂಲಕ ಹಣ ಪಡೆದು ಡ್ರಗ್ಸ್ ಅಡಗಿಸಿಟ್ಟ ಲೊಕೇಶನ್ ಕಳಿಸ್ತಿದ್ದ. ನಿರ್ಜನ ಪ್ರದೇಶದ ಪೊದೆ ಹಾಗೂ ಮರಗಿಡಗಳ ಬಳಿ ಡ್ರಗ್ಸ್ ತಂದಿಟ್ಟು ವಿದ್ಯಾರ್ಥಿಗಳು ಮತ್ತು ಟೆಕ್ಕಿಗೆ ಲೊಕೇಶನ್ ಕಳಿಸುತ್ತಿದ್ದ. ಅಲ್ಲದೇ ಇಂಜಿನಿಯರಿಂಗ್, ಮೆಡಿಕಲ್ ಸ್ಟೂಡೆಂಟ್ ಗಳೇ ಈತನ ಗ್ರಾಹಕರು ಎನ್ನಲಾಗಿದೆ. ಸದ್ಯ ಖಚಿತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ ಎಂಡಿಎಂಎ ಟ್ಯಾಬ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿ ವಿರುದ್ಧ ಕೆಜಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.