ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳ ಹುಚ್ಚಾಟ: ಕೆರೆಗೆ ಕಾರು ಪಲ್ಟಿ

ಬೆಂಗಳೂರು

ಆನೇಕಲ್: ಆನೇಕಲ್ ತಾಲೂಕಿನ ಹುಲ್ಲಹಳ್ಳಿಯ ಕ್ರೈಸ್ಟ್ ಕಾಲೇಜಿನ 7 ವಿದ್ಯಾರ್ಥಿಗಳು ಕುಡಿದ ಅಮಲಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಾ ಹುಚ್ಚಾಟ ಮೆರೆದಿದ್ದು, ಆನೇಕಲ್‌ನ ಚಿನ್ನಯ್ಯನಪಾಳ್ಯದ ಭುಜಂಗ ದಾಸಯ್ಯನ ಕೆರೆಗೆ ಕಾರು ಪಲ್ಟಿಯಾಗಿದೆ. ಎಕ್ಸ್‌ಯುವಿ ಕಾರಿನಲ್ಲಿ ಅತಿವೇಗವಾಗಿ ಕೆರೆಯ ಕಟ್ಟೆ ಮೇಲೆ ಕಾರನ್ನು ವಿದ್ಯಾರ್ಥಿಗಳು ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಕಾರು ಕೆರೆಗೆ ಪಲ್ಟಿಯಾಗಿದೆ.

ಕಾರಿನಲ್ಲಿದ್ದ 7 ಜನರ ಪೈಕಿ ಇಬ್ಬರು ಘಟನೆ ಸಂಭವಿಸುತ್ತಿದ್ದಂತೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಐವರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಕ್ರೈಸ್ಟ್ ಕಾಲೇಜಿನ ಪದವಿ ವಿದ್ಯಾರ್ಥಿಗಳು ಎನ್ನಲಾಗಿದೆ. ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೆರೆಗೆ ಬಿದ್ದ ಕಾರನ್ನು ಜೆಸಿಬಿ ಸಹಾಯದಿಂದ ಮೇಲೆಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿದ್ದಾರೆ.

Leave a Reply

Your email address will not be published.