ನಕಲಿ ಖಾತೆ ಸೃಷ್ಟಿಸಿ ಕೊಡಗಿನ ಕಾವೇರಿ ಮಾತೆಗೆ ಅವಮಾನ

ಜಿಲ್ಲೆ

ಕೊಡಗು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಕೊಡಗಿನ ಕಾವೇರಿ ಮಾತೆಗೆ ಅವಮಾನಿಸಿ ಪೋಸ್ಟರ್ ಹಾಕಿದ ಘಟನೆ ನೆಡೆದಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಹಿಂದೂ ಯುವಕನೋರ್ವನನ್ನು ಅರೆಸ್ಟ್ ಮಾಡಲಾಗಿದೆ.

ಇನ್ಸ್ಟಾಗ್ರಾಂ ನಕಲಿ ಖಾತೆ ಸೃಷ್ಟಿ ಮಾಡಿದ್ದ ಆರೋಪಿ ಹಿಂದೂ ಯುವಕ ಎಂದು ತಿಳಿದು ಬಂದಿದೆ. ಮೊಹಮದ್ ಅಷ್ಫಾಕ್ ಎಂಬ ಮುಸ್ಲಿಂ ಯುವಕನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಕಾವೇರಿ ಮತ್ತು ಕೊಡವ ಹೆಣ್ಣು ಮಕ್ಕಳನ್ನು ಅವಮಾನಿಸಿ ಪೋಸ್ಟರ್ ಹಾಕಿದ್ದ.

ಇನ್ನೂ ಪೋಸ್ಟ್ ಗಳು ವೈರಲ್ ಆದ ನಂತರ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನೈಜ ಅಪರಾಧಿಯನ್ನು ಬಂಧಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಕೊಡಗಿನ ಪೊಲೀಸರು ಅಪರಾಧಿಯನ್ನು ಪತ್ತೆ ಹಚ್ಚಲು ಫೇಸ್ ಬುಕ್ ಕ್ಯಾಲಿಫೋರ್ನಿಯಾದಲ್ಲಿರುವ ಮುಖ್ಯ ಕಚೇರಿ ಸಂಪರ್ಕಿಸಿ ನೈಜ ಅಪರಾಧಿಯನ್ನು ಬಂಧಿಸಿದ್ದಾರೆ.

 

 

Leave a Reply

Your email address will not be published.