Home Crime DYSP ಯಿಂದ ಮಹಿಳೆ ಮೇಲೆ ದೌರ್ಜನ್ಯ..!? ಕಚೇರಿಗೆ ಕರೆಸಿ ಒತ್ತಡ ಹೇರಿದ DYSP ಅರುಣ್ ನಾಗೇಗೌಡ..!?

DYSP ಯಿಂದ ಮಹಿಳೆ ಮೇಲೆ ದೌರ್ಜನ್ಯ..!? ಕಚೇರಿಗೆ ಕರೆಸಿ ಒತ್ತಡ ಹೇರಿದ DYSP ಅರುಣ್ ನಾಗೇಗೌಡ..!?

447
0
SHARE

ಪೊಲೀಸ್ ಡಿಪಾರ್ಟ್‌ಮೆಂಟ್ ಆದ್ರೆ ಜನ ಮೊದಲೇ ಮೂಗು ಮುರಿದು ನೂರೂರು ರೀತಿಯಲ್ಲಿ ಆಪಾದನೆ ಮಾಡ್ತಾರೆ. ಮತ್ತೆ ಖಾಕಿ ಮೇಲೆ ಜನರು ಆರೋಪ ಮಾಡುವಂತಹ ಘಟನೆ ನಡೆದಿದೆ. ಲೋಕಾಯುಕ್ತ ಡಿವೈಎಸ್‍ಪಿ, ಮಹಿಳಾ ಕೈಗಾರಿಕೋದ್ಯಮಿಯೊಬ್ಬರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದ್ದು, ನೊಂದ ಮಹಿಳಾ ಕೈಗಾರಿಕೋದ್ಯಮಿ ಲೋಕಾಯುಕ್ತ ಎಸ್‍ಪಿಗೆ ದೂರು ಸಲ್ಲಿಸಲು ಸಜ್ಜಾಗಿದ್ದಾರೆ.

ಕೇರಳ ಮೂಲದ ಕ್ಲಿಪ್ಪಿ ಸಹಭಾಗಿತ್ವದಲ್ಲಿ ಶಾಂತಶೇಖರ ರವರ ಭೂಮಿಯಲ್ಲೇ ಕ್ರಷರ್ ಆರಂಭಿಸಿದ್ರು. ಕಾಲ ಕ್ರಮೇಣ ಕ್ಲಿಪ್ಪಿ, ಶಾಂತ ಶೇಖರ ನಡುವೆ ಮನಸ್ಥಾಪ ಉಂಟಾಗಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸ್ಟೇ ಕೊಟ್ಟಿತ್ತು. ಅಷ್ಟರಲ್ಲಿ ಈ ಕ್ಲಿಪ್ಪಿ, ಶಾಂತಶೇಖರ ಮೈದುನ ವಿಜಯಕುಮಾರ್‌ಗೆ ಪಾಯಿಂಟ್ ಬ್ಲಾಕ್ ನಲ್ಲಿ ಗನ್ ಶೂಟ್ ಮಾಡ್ತೇನೆ ಅಂತ ಹೆದರಿಸಿದ್ದಾನೆ.

ಕ್ರಷರ್ ವಿವಾದ ಬಗೆಹರಿಸುವುದಾಗಿ ಮೈಸೂರು ಲೋಕಾಯುಕ್ತ ಡಿವೈಎಸ್‍ಪಿ ಅರುಣ್ ನಾಗೇಗೌಡ, ನವೆಂಬರ್ 1ರಂದು ಶಾಂತಶೇಖರ್‌ರನ್ನು ಲೋಕಾಯುಕ್ತ ಕಚೇರಿಗೆ ಕರೆಸಿ, ಕ್ಲಿಪ್ಪಿಗೆ ನಿಮ್ಮ ಭೂಮಿಯನ್ನು ಮಾರಾಟ ಮಾಡಿ, ಇಲ್ಲದಿದ್ದರೆ ನಿಮ್ಮ ಮಗಳ ಮದ್ವೆ ದಿನವೇ ಎಲ್ಲರನ್ನೂ ಬಂಧಿಸುತ್ತೇನೆಂದು ಹೆದರಿಸಿದ್ದಾರೆ.

ಕೇರಳದ ಕ್ಲಿಪ್ಪಿ ಆಸ್ತಿ ಕಬಳಿಸಲು ಗುಂಡ್ಲುಪೇಟೆಯ ಕೆಲವರ ಸಹಾಯದೊಂದಿಗೆ ಮೈಸೂರಿನ ಲೋಕಾಯುಕ್ತ ಡಿವೈಎಸ್‍ಪಿ ಅರುಣ್ ನಾಗೇಗೌಡರವರ ಮೂಲಕವಾಗಿ ಹೆದರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕ್ಲಿಪ್ಪಿ ವಿರುದ್ಧ 307 ಅಡಿಯಲ್ಲಿ ಕೇಸ್ ದಾಖಲಾಗಿದ್ದರೂ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಓದುತ್ತಿರುವ ನನ್ನ ಕೇರಿಯರ್ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಶಾಂತಾ ಅವರ ಮಗಳು ಆರೋಪ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಸಿದ್ದಾರೆ.ಒಟ್ನಲ್ಲಿ ಶಾಂತಶೇಖರ ಕುಟುಂಬಸ್ಥರಿಗೆ ಕೇರಳ ಮೂಲದ ಕ್ಲಿಪ್ಪಿ ಹೆದರಿಸುತ್ತಿದ್ದರೆ, ನ್ಯಾಯ ಕೊಡಿಸಬೇಕಾದ ಪೊಲೀಸ್ ಅಧಿಕಾರಿ ಅರುಣ್ ನಾಗೇಗೌಡ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇನ್ನಾದ್ರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಹಿಳೆಗೆ ನ್ಯಾಯ ಒದಗಿಸಬೇಕಿದೆ.

LEAVE A REPLY

Please enter your comment!
Please enter your name here