ಬೆಳಗ್ಗೆ ಟೀ ಮಾರ್ತಿದ್ದ ಮಧ್ಯಾಹ್ನ ಆಗ್ತಿದ್ದಂತೆ ಪೊಲೀಸ್ ಅಂತಿದ್ದ: ಹಣವಸೂಲಿ ಮಾಡ್ತಿದ್ದ ನಕಲಿ ಪೊಲೀಸ್ ಅಂದರ್

ಅಪರಾಧ

ಬೆಂಗಳೂರು: ಕಮಿಷನರ್ ಆಫೀಸ್ ಸಿಬ್ಬಂದಿ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನ, ಬೆಂಗ ಳೂರಿನ ಸಿಟಿ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶ್ರೀರಾಮಪುರದ ವಿಘ್ನೇಶ್ ಎಂದು ಗುರುತಿಸಲಾಗಿದೆ. ಬೆಳ ಗಿನ ಜಾವ ಮಾರ್ಕೆಟ್ ಸುತ್ತಮುತ್ತ ಟೀ ಮಾರುತ್ತಿದ್ದ ವಿಘ್ನೇಶ್ , ಮಧ್ಯಾಹ್ನದ ಬಳಿಕ ಪೊಲೀಸ್ ಎಂದು ವರಸೆ ಬದಲಿಸಿ, ವ್ಯಾಪಾರಿ ಗ ಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.