ಆಹಾರ ಇಲ್ಲದೇ ಬಿಸ್ಕೆಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ: ಆಹಾರವಿಲ್ಲದೆ ಯುವಕರ ಪರದಾಟ

ಜಿಲ್ಲೆ

ಕೊಡಗು: ಉಕ್ರೇನ್ ದೇಶದಲ್ಲಿ ಕೊಡಗಿನ ಯುವಕ ಅಪಾಯದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಕಗ್ಗತ್ತಲ‌ ಬಂಕರ್​ನಲ್ಲಿ ಅನ್ನ ಆಹಾರ ವಿಲ್ಲದೆ ಯುವಕರ ಪರದಾಟ ಪಡುತ್ತಿದ್ದಾನೆ ಎಂದು ಮಾಹಿತಿ ಲಭಿಸಿದೆ. ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ ಚಂದನ್ ಉಕ್ರೇನ್​ನ ಕಾರ್ಕಿವ್ ನಲ್ಲಿ ಇದ್ದಾರೆ. ಬಂಕರ್​ನಲ್ಲಿ ಅವಿತಿರುವ ಕರ್ನಾಟಕದ ಒಂಭತ್ತು ಮಂದಿ ಅಲ್ಲಿ ಬಿಸ್ಕೆಟ್, ಟ್ಯಾಪ್ ವಾಟರ್ ಕುಡಿದು ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮನ್ನು ಹೇಗಾದ್ರು ಮಾಡಿ ಇಲ್ಲಿಂದ ರಕ್ಷಿಸಿ. ಇನ್ನೆರೆಡು ದಿನಗಳಲ್ಲಿ ನಮ್ಮ‌ ಆಹಾರ ಖಾಲಿಯಾಗುತ್ತದೆ. ನಂತರ ನಾವು ಹಸಿವಿನಿಂದಲೆ ಸಾಯುವ ಪರಿಸ್ಥಿತಿ ಬರಲಿದೆ. ನಾವು ಯಾವುದೇ ಕಾರಣಕ್ಕೂ ಹೊರಗೆ ತೆರಳುವಂತಿಲ್ಲ. ಹೊರಗಡೆ ಭಾರೀ ಗುಂಡಿನ ಶಬ್ಧ ಕೇಳುತ್ತಿದೆ ಎಂದು ಜೊತೆ ಉಕ್ರೇನ್​ನಿಂದ ಚಂದನ್ ಸಂಕಷ್ಟ ತೋಡಿಕೊಂಡಿದ್ದಾರೆ. ತಂದೆ ಮಂಜುನಾಥ್ ಪುತ್ರನ ನೆನೆದು ಕಣ್ಣೀರಿಡುತ್ತಿದ್ದಾರೆ.

Leave a Reply

Your email address will not be published.