ಶಿಕ್ಷಣ ಸಚಿವರು ಚಡ್ಡಿ, ಬನಿಯನ್ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ ನೋಡೋಣ: ಡಿಕೆಶಿ ಟಾಂಗ್

ಬೆಂಗಳೂರು

ಬೆಂಗಳೂರು: ಸಚಿವರು ಚಡ್ಡಿ, ಬನಿಯನ್​ ‌ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ ಎಂದು ಶಿಕ್ಷಣ ಸಚಿವರಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಗೇಶ್ ಅವರ ಹೇಳಿಕೆ ತಲೆತಗ್ಗಿಸುವಂತದ್ದು, ಇಡೀ ದೇಶಕ್ಕೆ ಇದು ಮುಜುಗರ ತಂದಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಇದು ಎಲ್ಲ ಮಕ್ಕಳ ತಂದೆ ತಾಯಂದಿರ ಆಸೆ. ತ್ಯಾಗ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.

ಆದರೆ ಶೂ, ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ನಾಚಿಕೆ ತರಬೇಕು. ಸಚಿವರೇಕೆ ಬಟ್ಟೆ ಹಾಕಿಕೊಳ್ಳುತ್ತಾರೆ. ಚಡ್ಡಿ, ಬನಿಯನ್​ ‌ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ನಿಮಗೆ ತಾಕತ್​ ಇಲ್ಲ ಅಂದ್ರೆ ಹೇಳಿ, ನಾವು ರಾಜ್ಯದಲ್ಲಿ ಭಿಕ್ಷೆ ಬೇಡಿ ಶೂ ಸಾಕ್ಸ್ ಕೊಡಿಸುತ್ತೇವೆ. ನೊಂದ ಮಕ್ಕಳ ಗೌರವ ಕಾಪಾಡುತ್ತೇವೆ. ಇದು ಕರ್ನಾಟಕದ ಸ್ವಾಭಿಮಾನದ ವಿಚಾರ. ನಾವು ಪದವಿವರೆಗೆ ಉಚಿತ ಶಿಕ್ಷಣ ಕೊಡುತ್ತೇವೆ ಎಂದಿದ್ದಾರೆ.

 

Leave a Reply

Your email address will not be published.