Home Politics ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಶನಿವಾರ ಮತದಾನ; ಮತದಾರನ ಕೈಯಲ್ಲಿದೆ ಅಭ್ಯರ್ಥಿಗಳ ಭವಿಷ್ಯ

ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಶನಿವಾರ ಮತದಾನ; ಮತದಾರನ ಕೈಯಲ್ಲಿದೆ ಅಭ್ಯರ್ಥಿಗಳ ಭವಿಷ್ಯ

337
0

ಬೆಳಗಾವಿ ಲೋಕಸಭೆ ಕ್ಷೇತ್ರ, ಬಸವಕಲ್ಯಾಣ. ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಶನಿವಾರ ಮತದಾನ ನಡೆಯಲಿದೆ. ಮತದಾನಕ್ಕೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಯತ್ತ ಚುನಾವಣಾ ಅಧಿಕಾರಿಗಳು ತೆರಳಿದ್ದಾರೆ.

ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ ನಡೆದಿದೆ. ಬಿಜೆಪಿಯಿಂದ ಮಂಗಳ ಅಂಗಡಿ, ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಕಣದಲ್ಲಿದ್ದಾರೆ. ಲೋಕಸಭೆ ಕ್ಷೇತ್ರದ 2566 ಮತಗಟ್ಟೆ ಕೇಂದ್ರದತ್ತ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ತೆರಳಿದ್ದಾರೆ. ಮತಯಂತ್ರ, ಕೋವಿಡ್ ಕಿಟ್, ಮೆಡಿಕಲ್ ಕಿಟ್ ಜೊತೆಗೆ ಸಿಬ್ಬಂದಿ ಮತಗಟ್ಟೆಯತ್ತ ತೆರಳಿದ್ರು. ಬೆಳಗಾವಿ ವನಿತಾ ವಿದ್ಯಾಲಯದಿಂದ ಮತಗಟ್ಟೆ ಕೇಂದ್ರದತ್ತ ಸಿಬ್ಬಂದಿ ಪ್ರಯಾಣ ಬೆಳಸಿದ್ರು. ಲೋಕಸಭೆ ಕ್ಷೇತ್ರದ ಏಂಟು ವಿಧಾನಸಭೆ ಮತಕ್ಷೇತ್ರಗಳಿಗೆ 300 ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳನ್ನ ಮತಗಟ್ಟೆಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಶನಿವಾರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮತದಾನ ನಡೆಯಲಿದೆ.

ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಕಾಂಗ್ರೆಸ್ ನಿಂದ ಬಸನಗೌಡ ತುರ್ವೀಹಾಳ್, ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಕಣದಲ್ಲಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟು 305 ಮತಗಟ್ಟೆಗಳಿದ್ದು, 2,369 ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಒಟ್ಟು 2,06,429 ಮತದಾರರಿದ್ದಾರೆ. 1,01,340 ಪುರುಷರು, 1,05.076 ಮಂದಿ ಮಹಿಳೆಯರು ಮತದಾರರಿದ್ದಾರೆ. ಮತ ಚಲಾಯಿಸಲು ಅನುಕೂಲವಾಗುವಂತೆ ಒಟ್ಟು 305 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ 25 ಹೆಚ್ಚುವರಿ, 7 ಸೂಕ್ಷ್ಮ ಹಾಗೂ 62 ಅತಿಸೂಕ್ಷ್ಮ, 153 ಮತಗಟ್ಟೆಗಳಲ್ಲಿ ವೆಬ್ಕ್ಯಾ5ಸ್ಟಿಂಗ್ಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು. ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.

ಇತ್ತ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಲ್ಲಿ ಕಾಂಗ್ರೆಸ್ ನಿಂದ ಮಾಲಾ ನಾರಾಯಣ ರಾವ್, ಬಿಜೆಪಿಯಿಂದ ಶರಣು ಸಲಗಾರ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖೂಬಾ ಹಾಗೂ ಜೆಡಿಎಸ್ ನ ಖಾದ್ರಿ ಇಲ್ಲಿ ಕಣದಲ್ಲಿದ್ದಾರೆ. ಇನ್ನು ಕ್ಷೇತ್ರದ 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 231 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 2,39,782 ಮತದಾರರಿದ್ದು, 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. 1568 ಮಂದಿ ಅಧಿಕಾರಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಬಸವಕಲ್ಯಾಣದ ತೇರು ಮೈದಾನದಲ್ಲಿರುವ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಯತ್ತ ಅಧಿಕಾರಿಗಳನ್ನ 44 ಬಸ್‌ಗಳ ಕರೆದೊಯ್ಯಲಾಯ್ತು. ಮತದಾನದ ಹಿನ್ನಲೆಯಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿದೆ.20 ಪಿಎಸ್‌ಐಗಳು, 5 ಸಿಪಿಐ, 2 ಡಿಎಸ್‌ಪಿ, ಸೇರಿದಂತೆ ಅಂದಾಜು 1000 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಒಟ್ಟಾರೆ ಮೂರು ಕ್ಷೇತ್ರದ ಉಪಚುನಾವಣೆಗೆ ಶನಿವಾರ ಮತದಾರ ಪ್ರಭು ಹಕ್ಕು ಚಲಾವಣೆ ಮಾಡಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Previous articleನಿಯಮ ಪಾಲನೆ ಮಾಡದವರ ಮೇಲೆ ಮುಲಾಜಿಲ್ಲದೇ ಶಿಸ್ತಿನ ಕ್ರಮ; ಪೊಲೀಸ್ ಆಯುಕ್ತ ಕಮಲ್ ಪಂಥ್
Next articleಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ; ವಾಯುವ್ಯ ಸಾರಿಗೆ ಕಚೇರಿ ವಸ್ತುಗಳು ಸಂಪೂರ್ಣ ಜಪ್ತಿ

LEAVE A REPLY

Please enter your comment!
Please enter your name here