Home District ಕಾಡಾನೆಗಳ ದಾಳಿ; ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ; ಕಂಗಾಲಾದ ಅನ್ನದಾತ

ಕಾಡಾನೆಗಳ ದಾಳಿ; ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ; ಕಂಗಾಲಾದ ಅನ್ನದಾತ

466
0

ರಾಮನಗರ; ಕಾಡನೆಗಳ ಹಿಂಡು ರೈತರ ಜಮೀನಿನ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ, ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ಗ್ರಾಮಗಳ 5-6 ರೈತರ ಜಮೀನುಗಳ ಮೇಲೆ 8-10 ಕಾಡನೆಗಳ ಹಿಂಡು ದಾಳಿ ಮಾಡಿ ಬಾಳೆ, ಮಾವು, ರಾಗಿ, ಟೊಮೆಟೊ ಸೇರಿದಂತೆ ರೈತರ ಪಂಪ್‌ಸೆಟ್ ಗಳನ್ನ ಕೂಡ ನಾಶ ಪಡಿಸಿವೆ. ಈ ಕಾಡನೆಗಳ ಹಿಂಡು ಪದೇ ಪದೇ ಈ ಎರಡು ಗ್ರಾಮಗಳಲ್ಲಿ ಹೆಚ್ಚು ರೈತರ ಬೆಳೆಗಳನ್ನ ನಾಶ ಪಡಿಸುತ್ತಿವೆ ಇಷ್ಟಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆ ಹಾಗೂ ವಿದ್ಯುತ್ ಅಭಾವದ ನಡುವೆಯೂ ರೈತರು ಕಷ್ಟ ಪಟ್ಟು‌ ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಆನೆಗಳ ಪಾಲಗುತ್ತಿವೆ ಅಂತಾ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ಆನೆಗಳು ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಿಂದ ಬರುತ್ತಿವೆ ಈಗಾಗಲೇ ಆ ಅರಣ್ಯ ಪ್ರದೇಶದಲ್ಲಿ ಹಂತ ಹಂತವಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ರೈತರಿಗೆ ತಿಳಿ ಹೇಳಿದ್ರು. ಅಲ್ಲದೇ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ರು.

Previous articleಈಗಿನ ಸರ್ಕಾರ ‘ಯಡಿಯೂರಪ್ಪ ಅಂಡ್ ಕಂಪನಿ’ ಯಾಗಿ ಪರಿವರ್ತನೆಯಾಗಿದೆ; ವಾಟಾಳ್ ನಾಗರಾಜ್ ಗಂಭೀರ ಆರೋಪ
Next articleಕಾಡನೆಗಳ ದಾಳಿ; ಅಪಾರ ಪ್ರಮಾಣದ ಬೆಳೆ ನಾಶ; ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ

LEAVE A REPLY

Please enter your comment!
Please enter your name here