
ಇಂದು ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ನಡುವೆ ಎಲಿಮಿನೇಟರ್ ಕಾದಾಟ..!
ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಇಂದು ಮೊದಲ ಲೀಗ್ ಪಂದ್ಯ ಆಡಲಿದೆ. ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಬುಲ್ಸ್ ಕಣಕ್ಕೆ ಇಳಿಯಲಿದ್ದು, ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ. ಹೈ ಫ್ಲೈಯರ್ ಖ್ಯಾತಿಯ ಪವನ್ ಶೆರಾವತ್ ಅವರನ್ನು ನಿಯಂತ್ರಿಸಲು ಸುನಿಲ್ ಕುಮಾರ್ ನೇತೃತ್ವದ ಜೈಂಟ್ಸ್ ತಂಡದ ಬಲಿಷ್ಠ ರಕ್ಷಣಾ ವಿಭಾಗ ಸಜ್ಜಾಗಿದ್ದು, ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.