ಇಂಧನ ಬಿಕ್ಕಟ್ಟು: ಶ್ರೀಲಂಕಾದಲ್ಲಿ ಇಂದಿನಿಂದ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ

ಅಂತರಾಷ್ಟ್ರೀಯ

ಕೊಲೊಂಬೊ: ಶ್ರೀಲಂಕಾದಲ್ಲಿ ಇಂಧನ ಶಿಕ್ಷಣ ಸಚಿವಾಲಯವು ಇಂದಿನಿಂದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಬಿಕ್ಕಟ್ಟಿನಿಂದಾಗಿ ಕಾ ಶಿಕ್ಷಣ ಸಚಿವರು, ಮುಂದಿನ ರಜೆಯ ಅವಧಿಯಲ್ಲಿ ಶಾಲೆಯು ಪಠ್ಯಕ್ರಮವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರ ಮೇಲೆ ಸಾರಿಗೆ ತೊಂದರೆಯ ಪರಿಣಾಮ ಬೀರದ ಪರಿಸ್ಥಿತಿಗಳಲ್ಲಿ ವಿಭಾಗೀಯ ಮಟ್ಟದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ನಡೆಸಲು ಅನುಮತಿಸಲಾಗುವುದು ಎಂದಿದ್ದಾರೆ.

ಕೊಲಂಬೊ ನಗರದ ಆಸುಪಾಸಿನಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ-ಅನುಮೋದಿತ, ಖಾಸಗಿ ಶಾಲೆಗಳಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದೆ.

ಮುಂದಿನ ವಾರದಲ್ಲಿ ಆನ್‍ಲೈನ್ ಕ್ಲಾಸ್ ಗಳಿಗೆ ಅನುಕೂಲವಾಗುವಂತೆ ಶ್ರೀಲಂಕಾದ ಲೋಕೋಪಯೋಗಿ ಆಯೋಗವು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸದಿರಲು ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆಯೂ ಜೂನ್ 18ರಂದು ಶ್ರೀಲಂಕಾ ಸರ್ಕಾರವು ಎಲ್ಲಾ ಶಾಲೆಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವುದಾಗಿ ಘೋಷಿಸಿತ್ತು.

 

Leave a Reply

Your email address will not be published.